Breaking News

ಮದುವೆ ಆಗುವುದಾಗಿ ಹೇಳಿ ಲೈಂಗಿಕವಾಗಿ ಬಳಸಿಕೊಂಡ.. ಕೊನೆಗೂ ಕೈಕೊಟ್ಟು ಸಿಕ್ಕಿಬಿದ್ದ

Spread the love

ಹೈದರಾಬಾದ್​:ಸರ್ಕಾರಿ ಅಧಿಕಾರಿಯೋರ್ವ ತನ್ನದೇ ಇಲಾಖೆ ಮಹಿಳೆ ಅಧಿಕಾರಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕರ್ನೂಲ್​​ ಜಿಲ್ಲೆಯಲ್ಲಿ ಡ್ರಗ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿರುವ ಅಬೀದ್​ ಅಲಿ ಎಂಬಾತ ತನ್ನ ಸಹೋದ್ಯೋಗಿ ಮಹಿಳೆಗೆ ವಂಚಿಸಿದ ಕಿಡಿಗೇಡಿ.

 

ಇಬ್ಬರು ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ಒಂದೇ ಸಮುದಾಯಕ್ಕೆ ಸೇರಿದವರು ಕೂಡ. ಅಬೀದ್​ ಅಲಿ ತನಗೆ ಮದುವೆ ಆಗಿರೋ ವಿಷಯ ಬಚ್ಚಿಟ್ಟು ತನ್ನ ಇಲಾಖೆ ಮಹಿಳಾ ಅಧಿಕಾರಿ ಜತೆಗೆ ಲವ್ವಿ ಡವ್ವಿ ಆಡಿ ಬಿಕ್ಕಿಬಿದ್ದ ಘಟನೆಯೀಗ ಬೆಳಕಿಗೆ ಬಂದಿದೆ.

ಮಹಿಳಾ ಅಧಿಕಾರಿ ಆತನ ಮೇಲೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮದುವೆಯಾದ ವಿಚಾರ ಬಿಚ್ಚಿಟ್ಟು ತನ್ನನ್ನು ಪ್ರೀತಿಸಿದ. ಯಾವಾಗ ಮದುವೆ ವಿಚಾರ ನನಗೆ ಗೊತ್ತಾಯ್ತೋ, ಆಗ ತನ್ನ ಹೆಂಡತಿಗೆ ಡಿವೋರ್ಸ್​ ನೀಡುವುದಾಗಿ ಹೇಳಿದ. ಬಳಿಕ ನನ್ನನ್ನು ಮದುವೆ ಆಗುತ್ತೀನಿ ಎಂದಿದ್ದ. ಈಗ ಕೊಟ್ಟ ಮಾತಿನ ಮೇಲೆ ನಿಲ್ಲದೆ ಮೋಸ ಮಾಡಿದ್ದಾನೆ ಎಂದು ದೂರಿದ್ದಾರೆ. ಹಾಗೆಯೇ ಈ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಿ ವೈರಲ್​ ಮಾಡಿದ್ದಾರೆ. ಈ ಸಂಬಂಧ ಕರ್ನೂಲ್​ ಪೊಲೀಸ್ರು ಕೇಸ್​ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


Spread the love

About Laxminews 24x7

Check Also

ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಪಂ ಚುನಾವಣೆಗೆ ಸರಕಾರ ಸಜ್ಜು: ಶೀಘ್ರವೇ ಮೀಸಲು ಅಧಿಸೂಚನೆ ಪ್ರಕಟ

Spread the loveಧಾರವಾಡ: ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ