Breaking News

ಬೆಳಗಾವಿ | ಕುಂದು ಕೊರತೆ: ಎರಡು ವರ್ಷದಿಂದ ನೀರು ಪೋಲು!

Spread the love

ಬೆಳಗಾವಿ: ಇಲ್ಲಿನ ಆದರ್ಶ ನಗರದ ಮುಖ್ಯರಸ್ತೆಯಲ್ಲಿ, ಕರ್ನಾಟಕ ಬ್ಯಾಂಕ್‌ ಇರುವ ಸ್ಥಳದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದು ಇಂದು ನಿನ್ನೆಯದಲ್ಲ; ಬರೋಬ್ಬರಿ ಎರಡು ವರ್ಷಗಳಿಂದ ಪೋಲಾಗುತ್ತಲೇ ಇದೆ.

ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ, ನೀರು ಪೂರೈಸುವ ಎಲ್‌ ಆಯಂಡ್‌ ಟಿ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಈ ಕೊಳವೆ ಮಾರ್ಗದಿಂದ ನಗರದ ಬಹುಪಾಲು ಕಡೆ ನೀರು ಹರಿಯುತ್ತದೆ. ಹಾಗಾಗಿ, ಪ್ರತಿ ದಿನ ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೂ ನಿರಂತರ ನೀರು ಪೋಲಾಗುತ್ತದೆ. ರಸ್ತೆಯಲ್ಲಿ ನಿಂತು ಕೊಚ್ಚೆ ನಿರ್ಮಾಣವಾಗುತ್ತದೆ. ಬೇಸಿಗೆಯಲ್ಲಿ ನೀರಿನ ಅಭಾವ ಇದ್ದಾಗಲೂ ಇಲ್ಲಿ ನೀರು ವ್ಯರ್ಥವಾಗುವುದು ನಿಂತಿಲ್ಲ. ಈಗಲಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಜನರು ಬೇಸರಗೊಂಡು ಹೋರಾಟ ಮಾಡುವವರೆಗೆ ಕಾಯಬಾರದು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ