Breaking News

ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಪುನರಾರಂಭ

Spread the love

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ನಡುವೆ ಬಂದ್ ಆಗಿದ್ದ ಸಾರಿಗೆ ಬಸ್ ಸಂಚಾರ ಇಂದಿನಿಂದ ಪುನರಾರಂಭವಾಗಿದೆ.

ಕರ್ನಾಟಕದ ಬೆಳಗಾವಿ ಗಡಿ ಹಾಗೂ ಪುಣೆಯಲ್ಲಿ ಮಹಾರಾಷ್ಟ್ರ ಹಾಗೂ ಕನ್ನಡ ಪರ ಸಂಘಟನೆಗಳ ಆಕ್ರೋಶ, ಎರಡೂ ರಾಜ್ಯಗಳ ಬಸ್, ಕಾರು ಸೇರಿದಂತೆ ವಾಹನಗಳ ಮೇಲೆ ಕಲ್ಲು ತೂರಾಟ, ಮಸಿ ಬಳಿದ ಪ್ರಕರಣಗಳ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಮಹಾರಾಷ್ಟ್ರ ಹಾಗೂ ಬೆಳಗಾವಿ ನಡುವಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

 

ಬಸ್ ಗಳಿಲ್ಲದೇ ಸಾರ್ವಜನಿಕರು ಕಳೆದ ಎರಡು ದಿನಗಳಿಂದ ಪರದಾಟ ನಡೆಸಿದ್ದರು. ಇದೀಗ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಆರಂಭವಾಗಿದೆ. ಕರ್ನಾಟಕದ ಬೆಳಗಾವಿ, ಚಿಕ್ಕೋಡಿಯಿಂದ ಮಹಾರಾಷ್ಟ್ರದ ನಾಸಿಕ್, ಪುಣೆ, ಮುಂಬೈ, ಮೀರಜ್, ಔರಂಗಾಬಾದ್, ಸಿಂಧದುರ್ಗ ಸೇರಿದಂತೆ ಹಲವೆಡೆ ಕೆ ಎಸ್ ಆರ್ ಟಿಸಿ, ಸೇರಿದಂತೆ 400ಕ್ಕೂ ಹೆಚ್ಚು ಬಸ್ ಗಳು ಸಂಚಾರ ಆರಂಭಿಸಿವೆ.


Spread the love

About Laxminews 24x7

Check Also

ಸ್ವಯಂ ಉದ್ಯೋಗದಿಂದ ನಿಶ್ಚಿತ ಗುರಿ ಸಾಧ್ಯ

Spread the loveರಾಮದುರ್ಗ: ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು, ಆತ್ಮವಿಶ್ವಾಸದೊಂದಿಗೆ ಸ್ವಯಂ ಉದ್ಯೋಗ ಕೆಗೊಂಡದಲ್ಲಿ ನಿಶ್ಚಿತ ಗುರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ