Breaking News

ಟಿಳಕವಾಡಿಯ ರೈಲ್ವೆ ಮೂರನೇ ಗೇಟ ಮೇಲ್ಸೇತುವೆಯಲ್ಲಿ ,ಕಾರು- ಬೈಕುಗಳ ಮಧ್ಯೆ ಡಿಕ್ಕಿ: ಮೂವರಿಗೆ ಗಾಯ

Spread the love

ಬೆಳಗಾವಿ: ಇಲ್ಲಿನ ಟಿಳಕವಾಡಿಯ ರೈಲ್ವೆ ಮೂರನೇ ಗೇಟಿನ ರಸ್ತೆ ಮೇಲ್ಸೇತುವೆಯಲ್ಲಿ ಗುರುವಾರ ಕಾರ್ ಹಾಗೂ ಎರಡು ಬೈಕುಗಳ ಮಧ್ಯೆ ಮುಖಿಮುಖಿ ಡಿಕ್ಕಿ ಸಂಭವಿಸಿ ಮೂವರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿ ಕಡೆಯಿಂದ ಗೋವಾ ಕಡೆಗೆ ಹೊರಟಿದ್ದ ಕಾರ್ ಎದುರಿನಿಂದ ಬರುತ್ತಿದ್ದ ಎರಡು ಬೈಕುಗಳಿಗೆ ಗುದ್ದಿತು.

ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಪುಟಿದು, ರಸ್ತೆ ತಡೆಯ ಮೇಲಿಂದ ಹಾರಿ 15 ಅಡಿ ಅಂತರದಿಂದ ಕೆಳಗೆ ಬಿದ್ದರು. ಕಾರ್ ಕೂಡ ರಸ್ತೆ ಪಕ್ಕದ ತಡೆಗೋಡೆ ಏರಿ ಓರೆಯಾಗಿ ನಿಂತಿತು. ಇನ್ನೊಂದು ಬೈಕ್ ಕಾರಿನಡಿ ಸಿಲುಕಿತು.

ಸೇತುವೆ ಮೇಲಿಂದ ಕೆಳಗೆ ಬಿದ್ದ ಬೈಕ್ ಸವಾರ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದರು. ಇತರ ವಾಹನ ಸವಾರರೇ ಮುಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಸ್ಥಳಕ್ಕೆ ಬಂದ ಪೊಲೀಸರು ಸೇತುವೆ ಸಂಚಾರ ಬಂದ್ ಮಾಡಿ ವಾಹನಗಳನ್ನು ತೆರವುಗೊಳಿಸಿದರು


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ