Breaking News

ಧಾರಾವಿ ಪುನರ್‌ನಿರ್ಮಾಣಕ್ಕೆ ಗೌತಮ್‌ ಅದಾನಿ: 5,069 ಕೋಟಿ ರೂ. ಹೂಡಿಕೆ

Spread the love

ದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಪ್ರಾಪರ್ಟೀಸ್‌ಗೆ ಭಾರತದ ದೊಡ್ಡ ಪುನರ್‌ನಿರ್ಮಾಣ ಯೋಜನೆಗಳಲ್ಲಿ ಒಂದಾಗಿರುವ ಧಾರಾವಿ ಪುನರ್‌ನಿರ್ಮಾಣ ಯೋಜನೆಯ ಟೆಂಡರ್‌ ಸಿಕ್ಕಿದೆ. ಮುಂಬಯಿಯಲ್ಲಿರುವ ಧಾರಾವಿ ಕೊಳೆಗೇರಿಯು ಏಷ್ಯಾದಲ್ಲೇ ಎರಡನೇ ಅತೀ ದೊಡ್ಡ ಕೊಳೆಗೇರಿ ಆಗಿದೆ.

ಕೊಳೆಗೇರಿಯ ಪುನರ್‌ನಿರ್ಮಾಣಕ್ಕೆ ಅದಾನಿ ಪ್ರಾಪರ್ಟೀಸ್‌ 5,069 ಕೋಟಿ ರೂ. ಹೂಡಿಕೆ ಮಾಡಲಿದೆ.

ಡಿಎಲ್‌ಎಫ್ ಸೇರಿದಂತೆ ಜಗತ್ತಿನ ಎಂಟು ನಿರ್ಮಾಣ ಕಂಪೆನಿ ಗಳು ಬಿಡ್‌ನ‌ಲ್ಲಿ ಭಾಗವಹಿಸಿದ್ದವು. ಯೋಜನೆಗಾಗಿ ಸರಕಾರ 1,600 ಕೋಟಿ ರೂ.ಗಳನ್ನು ಬಿಡ್‌ ಮೊತ್ತವಾಗಿ ನಿಗದಿಪಡಿಸಿತ್ತು. ಅತೀ ಹೆಚ್ಚು ಮೊತ್ತ ಬಿಡ್‌ ಮಾಡಿದ ಅದಾನಿ ಪ್ರಾಪರ್ಟೀಸ್‌ ತೆಕ್ಕಗೆ ಈ ಯೋಜನೆ ಒಲಿದಿದೆ.

ಧಾರಾವಿ ಪುನರ್‌ನಿರ್ಮಾಣ
– 5,069 ಕೋಟಿ ರೂ. ಅದಾನಿ ಪ್ರಾಪರ್ಟೀಸ್‌ ಹೂಡಿಕೆ
– 240 ಹೆಕ್ಟೇರ್‌ ಪ್ರದೇಶ ಅಭಿವೃದ್ಧಿ ಕಾರ್ಯ
– 24.62 ಹೆಕ್ಟೇರ್‌ ಖಾಸಗಿ ಪ್ರದೇಶ ಭೂಸ್ವಾಧೀನ
– 60,000 ಕುಟುಂಬಗಳಿಗೆ ಉಚಿತ ಮನೆಗಳು ನಿರ್ಮಾಣ
– 13,000 ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ
– 405 ಚ.ಅಡಿ ಸ್ಥಳದಲ್ಲಿ ಪ್ರತೀ ಕೊಳೆಗೇರಿ ಕುಟುಂಬಕ್ಕೆ ಮನೆ ನಿರ್ಮಾಣ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ