Breaking News

ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಪಿನ್ ಬಾಕ್ಸ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಸಂಜಯ್ ಪಾಟೀಲ್ ಹೆಬ್ಬಾಳ್ಕರ್‍ಗೆ ತಿರುಗೇಟು

Spread the love

ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಪಿನ್ ಬಾಕ್ಸ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ ಎನ್ನುವ ಮೂಲಕ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ತಿರುಗೇಟು ನೀಡಿದ್ದಾರೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಅದಕ್ಕೆ ನಾವು ಏನು ಮಾಡೋದಿಕ್ಕೆ ಆಗುತ್ತದೆ. ಹಂಚುವವರು ಹಂಚುತ್ತಾರೆ. ನಾನು ಸಧ್ಯಕ್ಕೆ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ಗಂಡಸು ನಾನು ಹೇಗೆ ಹಳದಿ, ಕುಂಕುಮ ಕಾರ್ಯಕ್ರಮ ಮಾಡೋಕೆ ಆಗುತ್ತದೆ. ಕಾರ್ಯಕ್ರಮ ಮಾಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಎಲ್ಲರೂ ಏನು ಬೇಕಾದ ಕಾರ್ಯಕ್ರಮ ಮಾಡಬಹುದು. ಅವರವರ ಕಾರ್ಯಕ್ರಮ ಮಾಡುತ್ತಾರೆ. ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಬೆಳೆಸಲು ಪಕ್ಷದ ಕಾರ್ಯಕ್ರಮಗಳಲ್ಲಿ ಇರುತ್ತೇನೆ ಎಂದರು.

ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಟಿಪಿನ್ ಬಾಕ್ಸ ಹಂಚುತ್ತಿರುವ ವಿಚಾರಕ್ಕೆ ತೆಗೆದುಕೊಳ್ಳುವವರು ತೆಗೆದುಕೊಳ್ಳುತ್ತಿರುಬಹುದು ಆದರೆ ಟಿಪಿನ್ ಬಾಕ್ಸ ಬಿಜೆಪಿ ಕಾರ್ಯಕರ್ತರು ಯಾರೂ ತೆಗೆದುಕೊಳ್ಳುವುದಿಲ್ಲ. ಮುಂದೆ ಮತ್ತೆ ಬೇರೆ ಬೇರೆ ಇರಬಹುದು. ಈ ಬಗ್ಗೆ ಚಿಂತನೆ ಮಾಡಬೇಕಿದೆ. ಚುನಾವಣೆ ಅಭಿವೃದ್ಧಿ ಮೇಲೆ ಆಗಬೇಕೇ ಹೊರತು. ಏನಾದ್ರೂ ಹಂಚಿ ಆಗಬಾರದು. ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಹಾಕುವ ಅಧಿಕಾರ ಕೊಟ್ಟಿದ್ದಾರೆ. ಆ ಮತವನ್ನೂ ಯಾರೂ ಮಾರಾಟ ಮಾಡಬಾರದು ಎಂದು ಕಿಡಿಕಾರಿದರು.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ