Breaking News

ದಿಲ್ಲಿ – ಹುಬ್ಬಳ್ಳಿ ನಡುವೆ ನಿತ್ಯ ವಿಮಾನ ಸೇವೆಗೆ ಚಾಲನೆ

Spread the love

ಹುಬ್ಬಳ್ಳಿ: ಬಹು ದಿನಗಳ ಬೇಡಿಕೆಯಾಗಿದ್ದ ದಿಲ್ಲಿ – ಹುಬ್ಬಳ್ಳಿ ವಿಮಾನಯಾನಕ್ಕೆ ಸೋಮವಾರ ಕೇಂದ್ರ ನಾಗರಿಕರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹಸುರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಇದೇ ವಿಮಾನದಲ್ಲಿ ಪ್ರಹ್ಲಾದ ಜೋಷಿ ದಿಲ್ಲಿಗೆ ತೆರಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಹ್ಲಾದ ಜೋಷಿ, ಹುಬ್ಬಳ್ಳಿ-ದಿಲ್ಲಿ ನಡುವೆ ನೇರ ವಿಮಾನ ಸೌಲಭ್ಯ ಬೇಕೆಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಈ ಭಾಗದ ಪ್ರಗತಿಯ ದೃಷ್ಟಿಯಿಂದ ಇದು ಮಹತ್ವದ ಮೈಲುಗಲ್ಲಾಗಿದೆ.

ಹುಬ್ಬಳ್ಳಿಯಿಂದ ಕೇವಲ 2 ತಾಸು 30 ನಿಮಿಷಗಳಲ್ಲಿ ದಿಲ್ಲಿ ತಲುಪಬಹುದಾಗಿದೆ. ಪ್ರತಿ ನಿತ್ಯ ವಿಮಾನಯಾನ ಸೇವೆ ಲಭ್ಯವಿದೆ ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ