Breaking News
Home / ರಾಜಕೀಯ / ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣೆ

ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣೆ

Spread the love

ಅಪ್ಪು ಅಭಿಮಾನಿಗಳ ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಆಗಿದ್ದು, ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣ ಮನೆ ಮಾಡಿತ್ತು.

 


ಇಂದು ರಾಜ್ಯಾದ್ಯಂತ ಪವರ್ ಸ್ಟಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಗೊಂಡಿದೆ. ಬೆಳಗಾವಿಯಲ್ಲೂ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ನಡೆಯಿತು. ಸ್ವರೂಪ-ನರ್ತಕಿ, ಕಾರ್ನಿವಲ್ ಹಾಗೂ ಐನಾಕ್ಸ್ ಈ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರದ ಮೊದಲ ಶೋ ವಿಕ್ಷೀಸಲು ೧೦:೪೫ ಗಂಟೆಗೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.


ಅಪ್ಪು ಚಿತ್ರವುಳ್ಳ ಟೀ ಶರ್ಟಗಳನ್ನು ತೊಟ್ಟು ನೂರಾರು ಸಂಖ್ಯೆಯಲ್ಲಿ ಭಾಗಿಯಾದ ಅಭಿಮಾನಿಗಳು ಮೊದಲಿಗೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು. (ಫ್ಲೋ)
ಮೊದಲ ಶೋಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಗಂಧದ ಗುಡಿ ಚಿತ್ರ ವೀಕ್ಷಿಸಲು ಆಗಮಿಸುತ್ತಿರುವ ಅಪ್ಪು ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಚಿತ್ರ ನೋಡಲು ಆಗಮಿಸಿದ ಅಭಿಮಾನಿಗಳಿಗೆ ಸಸಿಗಳನ್ನ ನೀಡಿ ಪರಿಸರ ರಕ್ಷಣೆಯ ಸಂದೇಶವನ್ನು ಕೂಡ ನೀಡಲಾಗುತ್ತಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ