Breaking News

ಮೇಕಪ್‌ ಮ್ಯಾನ್‌ ಕೈಚಳಕ: ನಟಿಯ ವೀಡಿಯೋ ಬ್ಲ್ಯಾಕ್‌ಮೇಲ್: ಬಂಧನ

Spread the love

ಬೆಂಗಳೂರು: ನಟ, ನಟಿಯರೇ ಎಚ್ಚರ. ನಿಮ್ಮ ಮೇಕಪ್‌ ಮ್ಯಾನ್‌ಗಳಿಗೆ ಮೊಬೈಲ್‌ ಕೊಡುವ ಮೊದಲು ಎಚ್ಚರ ವಹಿಸಬೇಕಿದೆ. ಇಲ್ಲೊಬ್ಬ ಮೇಕಪ್‌ಮ್ಯಾನ್‌ ಹಿರಿ ಮತ್ತು ಕಿರುತೆರೆ ನಟಿಯೊಬ್ಬರ ಅರೆನಗ್ನ ವೀಡಿಯೋ ಇಟ್ಟುಕೊಂಡು 30 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

 

ಭುವನೇಶ್ವರಿನಗರ ನಿವಾಸಿ ಮಹಾಂತೇಶ್‌ (37) ಬಂಧಿತ. ಆರೋಪಿಯಿಂದ ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಸಂತ್ರಸ್ತೆಗೆ ಆರೋಪಿ ದೂರದ ಸಂಬಂಧಿಯಾಗಿದ್ದು, ಆಕೆಗೆ ಮೇಕಪ್‌ ಮ್ಯಾನ್‌ ಕೂಡ ಆಗಿದ್ದ. ಹೀಗಾಗಿ ಆಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ. ಸಂತ್ರಸ್ತ ನಟಿ ಆಯಪ್‌ವೊಂದರಲ್ಲಿ ಖಾತೆ ತೆರೆದು, ತನ್ನ ಅರೆ ನಗ್ನ ವೀಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿ ದ್ದರು. ಇಂತಹ ಲೈವ್‌ ಸ್ಟ್ರೀಮಿಂಗ್‌ ಆಯಪ್‌ಗಳಲ್ಲಿ ಹಣ ಪಾವತಿಸಿ, ಸಬ್‌ಸೆð„ಬ್‌ ಮಾಡಿಕೊಂಡರೆ ಮಾತ್ರ ಕೆಲ ವೀಡಿಯೋಗಳನ್ನು ನೋಡಲು ಅವಕಾಶ ಇರುತ್ತದೆ. ಈ ಬಗ್ಗೆ ಆಕೆಯ ಕುಟುಂಬ ಸದಸ್ಯರಿಗೂ ಮಾಹಿತಿ ಇರಲಿಲ್ಲ. ಈ ಎಲ್ಲ ಮಾಹಿತಿಯನ್ನು ತಿಳಿದುಕೊಂಡ ಆರೋಪಿ, ಹೊಸ ಮೊಬೈಲ್‌ ನಂಬರ್‌ನಿಂದ ಸಂದೇಶ ಕಳುಹಿಸಿ, ತನ್ನ ಬಳಿ ನಿಮ್ಮ ನಗ್ನ ಮತ್ತು ಅರೆ ನಗ್ನ ವೀಡಿಯೋಗಳು ಇರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಈ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡದಿರಲು 30 ಲಕ್ಷರೂ.ಗೆ ಬೇಡಿಕೆ ಇಟ್ಟಿದ್ದ. ಆಕೆ ಪೊಲೀಸರಿಗೆ ದೂರು ನೀಡಿದ್ದರು.


Spread the love

About Laxminews 24x7

Check Also

ಔತಣ ಕೂಟದಲ್ಲಿ ಪಾಲ್ಗೊಂಡು, ಡಿಕೆಶಿಗೆ ಅಭಿನಂದಿಸಿದ ಹೆಬ್ಬಾಳಕರ್, ಹಟ್ಟಿಹೊಳಿ

Spread the loveಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ