Breaking News

80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

Spread the love

ಬೆಂಗಳೂರು: ಕಾಂಗ್ರೆಸ್‍ನ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ (R Ashok) ಲೇವಡಿ ಮಾಡಿದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಬಸ್ ಯಾತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನವರ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ (Mallikarjun Kharge) ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ. ಆದರೆ ಆ ಡ್ರೈವರ್ ಬ್ಯಾಕ್‍ಸೀಟ್‍ನಲ್ಲಿ ಸೋನಿಯಾ ಗಾಂಧಿ (Sonia Gandhi) ಇದ್ದಾರೆ. ಬಸ್‍ನ ಸ್ಟೇರಿಂಗ್, ಸೀಟು ಎಲ್ಲವೂ ಸೋನಿಯಾ ಗಾಂಧಿ ಕೈಯಲ್ಲಿ ಇರಲಿದೆ. ಖರ್ಗೆ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಅಷ್ಟೇ ಎಂದು ಟೀಕಿಸಿದರು.

ಕಾಂಗ್ರೆಸ್ ಅವರು ಬಸ್, ರೈಲು, ಏನಾದರೂ ಬಿಡಲು ಕರ್ನಾಟಕದ (Karnataka) ಜನ ಇವರನ್ನು ನಂಬುವುದಿಲ್ಲ. ಕಾಂಗ್ರೆಸ್‍ಗೆ ಇದು ಕೊನೆಯ ಚುನಾವಣೆ. ಕಾಂಗ್ರೆಸ್‍ನ ಶವ ಪೆಟ್ಟಿಗೆಯ ಕೊನೆ ಮೊಳೆ ಕರ್ನಾಟಕದ ರಾಜ್ಯದ ಜನ ಹೊಡೆಯುತ್ತಾರೆ ಎಂದರು.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ