Breaking News

ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ

Spread the love

ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ

ಜೇವರ್ಗಿ : ಸಹಾಹ ಸಿಂಹ ಡಾ|| ವಿಷ್ಣುವರ್ಧನರವರ 10ನೇ ಪುಣ್ಯಸ್ಮರಣೆ ನಿಮಿತ್ಯ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐದು ಜನ ಸಾಧಕರಿಗೆ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ|| ವಿಷ್ಣುಸೇನಾ ಸಮಿತಿ ತಾಲೂಕ ಅಧ್ಯಕ್ಷರಾದ ಬಸವರಾಜ ಬಾಗೇವಾಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದೀರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿವರ್ಷನು ಕೂಡ ನಾವು ನಮ್ಮ ಸಂಘಟನೆ ವತಿಯಿಂದ ಡಾ|| ವಿಷ್ಣುವರ್ಧನ ಅವರ ಪುಣ್ಯಸ್ಮರಣೆ ಅಂಗವಾಗಿ ಒಂದಲ್ಲ ಒಂದು ವಿನೂತನ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿದ್ದು,

ಅದರಂತೆ ಈ ವರ್ಷನು ಕೂಡ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐದು ಜನರನ್ನು ಗುರುತಿಸಿ ಅವರಿಗೆ ಇದೇ ದಿ.22ರಂದು ಪಟ್ಟಣದ ದಾನಮ್ಮ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 10.30ಗಂಟೆಗೆ ಕರುನಾಡು ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಒಂದು ಕಾರ್ಯಕ್ರಮದಲ್ಲಿ ರಾಜಕೀಯ ಧುರೀಣರು, ತಾಲೂಕ ಮಟ್ಟದ ಅಧಿಕಾರಿಗಳು, ವಿವಿಧ ಮಠಾಧೀಶರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಆಗಮಿಸುತ್ತಿದ್ದು, ಕಾರಣ ಡಾ|| ವಿಷ್ಣುವರ್ಧನರವರ ಅಭಿಮಾನಿಗಳು ಹಾಗೂ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕೆಂದು ಬಸವರಾಜ ಬಾಗೇವಾಡಿ ಮನವಿ ಮಾಡಿದ್ದಾರೆ.

ಈ ಸುದ್ಧಿಗೋಷ್ಠಿಯಲ್ಲಿ ಮರೆಪ್ಪ ಸರಡಗಿ, ಚಿದಾನಂದ ಭಾವಿಮನಿ, ಶ್ರೀಶೈಲ ದ್ಯಾಮಗೊಂಡ, ಸಿದ್ದು ಗಜ, ಅಖಂಡು, ನಿಂಗು ದೊಡ್ಮನಿ, ಸಿಕ್ರೇಶ್ವರ ಕಟ್ಟಿಸಂಗಾವಿ, ಪರಶುರಾಮ ಜಮಖಂಡಿ ಸೇರಿದಂತೆ ಅನೇಕರು ಇದ್ದರು


Spread the love

About Laxminews 24x7

Check Also

ರಾಜ್ಯದಲ್ಲಿರೋದು ಬ್ರೋಕರ್‌ಗಳ ಸರ್ಕಾರ – ಹೆಚ್‌ಡಿಕೆ ವಾಗ್ದಾಳಿ

Spread the love ಹಾಸನ: ಈ ರಾಜ್ಯದ ಮುಖ್ಯಮಂತ್ರಿಗಳು ಅಹಿಂದ ಮುಂದಿಟ್ಟು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಈ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ