Breaking News

ನಾನು ಆಪ್‌ ಬೆಂಬಲಿಗ ಅಲ್ಲ; ಕಟ್ಟಾ ಬಿಜೆಪಿಗ: ಅಟೋ ಚಾಲಕ ವಿಕ್ರಂ

Spread the love

ಹಮದಾಬಾದ್‌: ಆಮ್‌ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಇತರ ಮುಖಂಡರಿಗೆ ಭೋಜನ ಕೂಟ ಏರ್ಪಡಿಸಿದ್ದ ಗುಜರಾತ್‌ನ ಅಟೋ ಚಾಲಕ ವಿಕ್ರಂ ದಂತಾನಿ ಈಗ ತಾವು ಬಿಜೆಪಿಯ ಬೆಂಬಲಿಗ ಎಂದು ಹೇಳಿಕೊಂಡಿದ್ದಾರೆ.

 

“ನನಗೆ ಮತ ಹಾಕಲು ಅವಕಾಶ ಸಿಕ್ಕಿದ ಮೊದಲ ದಿನದಿಂದಲೂ ಬಿಜೆಪಿಯ ಬೆಂಬಲಿಗನೇ ಆಗಿದ್ದೇನೆ’ ಎಂದು ಅವರು ಹೇಳಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆಟೋ ರಿಕ್ಷಾ ಒಕ್ಕೂಟದ ಸೂಚನೆಯ ಮೇರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದೆ ಎಂದು ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷ ಮತ್ತು ಅದರ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಜತೆಗೆ ಯಾವುದೇ ಬಾಂಧವ್ಯ ಇಲ್ಲ ಎಂದು ವಿಕ್ರಂ ದಂತಾನಿ ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ