Breaking News

ಯಲ್ಲಮ್ಮನ ‌ಗುಡ್ಡದ ಶ್ರೀ ರೇಣುಕಾದೇವಿ ದೇಗುಲಕ್ಕೆ ಸಿಎಂ ಪತ್ನಿ ಚನ್ನಮ್ಮ ಬೊಮ್ಮಾಯಿ

Spread the love

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ನಿ ಚನ್ನಮ್ಮ ಬೊಮ್ಮಾಯಿ ಅವರು ನವರಾತ್ರಿ ನಿಮಿತ್ತ ಮನೆ ದೇವತೆ ಸವದತ್ತಿ ಶ್ರೀ ರೇಣುಕಾ ದೇವಿಯ ದರ್ಶನ ಪಡೆದರು.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಘಟ್ಟಕ್ಕೆ ಎಣ್ಣೆ ಸಮರ್ಪಿಸಿದರು. ಬಳಿಕ ಭಕ್ತಿ ಭಾವದಿಂದ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರೇಣುಕಾದೇವಿ ಯಲ್ಲಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ದೇವತೆ. ಹಾಗಾಗಿ ಹುಬ್ಬಳ್ಳಿಯಿಂದ ಖಾಸಗಿ ವಾಹನದಲ್ಲಿ ಬಂದು ಚನ್ನಮ್ಮ ಬೊಮ್ಮಾಯಿ ದೇವಿ ದರ್ಶನ ಪಡೆದರು.

ಈ ವೇಳೆ, ದೇವಸ್ಥಾನ ಆಡಳಿತ ‌ಮಂಡಳಿ ಹಾಗೂ ದೇವಸ್ಥಾನ ಸಿಇಒ ಬಸವರಾಜ ಜಿರಗ್ಯಾಳ ಹಾಗೂ ನಾಗರತ್ನ ಚೋಳಿನ್ ಅವರು ಚನ್ನಮ್ಮ ‌ಬೊಮ್ಮಾಯಿಗೆ ಸತ್ಕಾರ ಮಾಡಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ