Breaking News

ಪಿಎಫ್‌ಐ ನಿಷೇಧ: ಡಿಕೆಶಿ, ಸಿದ್ದರಾಮಯ್ಯ ಬಾಯಿ ತೆರೆದಿಲ್ಲ ಏಕೆ -ಬಿಜೆಪಿ ಪ್ರಶ್ನೆ

Spread the love

ನವದೆಹಲಿ: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಆದೇಶ ಬಿಜೆಪಿ -ಕಾಂಗ್ರೆಸ್‌ ನಡುವೆ ರಾಜಕೀಯ ತಿರುವು ಪಡೆದುಕೊಂಡಿದೆ.

ಪಿಎಫ್‌ಐ ನಿಷೇಧ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಪಿಎಫ್‌ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲಾ ದೇಶ ವಿರೋಧಿ ಚಟುವಟಿಕೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಷ (ಕಾಂಗ್ರೆಸ್) ಬೆಂಗಾವಲಾಗಿ ನಿಂತಿತ್ತು ಎಂದು ಆರೋಪಿಸಿದೆ.

 

ಪಿಎಫ್‌ಐ ನಿಷೇಧದ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಏಕೆ ಇನ್ನೂ ಬಾಯಿ ತೆರೆದಿಲ್ಲ?, ಮತ ಬ್ಯಾಂಕ್‌ ಕಳೆದುಕೊಳ್ಳುವ ಭಯವೇ ಎಂದು ಬಿಜೆಪಿ ಟೀಕಿಸಿದೆ.

ಮಾನ್ಯ ಸಿದ್ದರಾಮಯ್ಯ ಅವರೇ, ನಾವು ನುಡಿದಂತೆ ನಡೆದಿದ್ದೇವೆ. ನೀವು ‘ಉಗ್ರಭಾಗ್ಯ’ ಯೋಜನೆಯಡಿ ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ ಎಂದು ಬಿಜೆಪಿ ಗುಡುಗಿದೆ.


Spread the love

About Laxminews 24x7

Check Also

ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

Spread the loveಬೆಂಗಳೂರು: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ