Breaking News

ಫಿಸಿಕಲ್ ಟ್ರೈನರ್‌ಗೆ ಉಂಗುರ ತೊಡಿಸಿ ಎಂಗೇಜ್ಡ್ ಆದ ಆಮೀರ್ ಖಾನ್ ಪುತ್ರಿ

Spread the love

ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan) ಕೊನೆಗೂ ನಿಶ್ಚಿತಾರ್ಥ (Engaged) ಮಾಡಿಕೊಂಡಿದ್ದಾರೆ. ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇಂದು ಮತ್ತೊಂದು ಹಂತ ಪಡೆದುಕೊಂಡಿದೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಸತಿ ಪತಿಯಾಗಲು ಹೊರಟಿದೆ

ನೂಪುರ್ ಶಿಖಾರೆ (Nupur Shikhare) ಮತ್ತು ಇರಾ ಖಾನ್ ಪ್ರೀತಿಗೆ ಹಲವು ವರ್ಷಗಳು. ಆಕೆಗೆ ಫಿಸಿಕಲ್ ಟ್ರೈನರ್ ಆಗಿದ್ದ ನೂಪುರ್ ನನ್ನು ಇರಾ ಇಷ್ಟಪಡುತ್ತಾಳೆ. ಅವನ ಜೊತೆಯೇ ಹಲವು ಟ್ರಿಪ್ ಗಳನ್ನು ಕೂಡ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಮನೆಯಲ್ಲೇ ಹಲವು ದಿನಗಳಿಂದ ವಾಸಿಸುತ್ತಿದ್ದರು. ಇದೊಂದು ಸಹಜೀವನ ಎಂದೇ ಬಾಲಿವುಡ್ ಮಾತಾಡಿಕೊಂಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡುವಂತಹ ಕೆಲಸವನ್ನು ಈ ಜೋಡಿ ಮಾಡಿದೆ.

ಮೊನ್ನೆಯಷ್ಟೇ ಬಿಕಿನಿಯಲ್ಲಿ ಇರಾ ಹುಟ್ಟು ಹಬ್ಬವನ್ನು ಆಚರಿಸಿಕೊಂಡಾಗ ಮತ್ತು ಪೂಲ್ ಸೈಡ್ ಪಾರ್ಟಿ ಮಾಡಿದಾಗಲೂ ನೂಪುರ್ ಶಿಖಾರೆ ಜೊತೆಯಲ್ಲೇ ಇದ್ದರು. ಅಲ್ಲದೇ ಈಜುಕೊಳದಲ್ಲಿ ಇಬ್ಬರೂ ತಬ್ಬಿಕೊಂಡ ಫೋಟೋವನ್ನು ಸ್ವತ: ಇರಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನಿಶ್ಚಿತಾರ್ಥಕ್ಕಿಂತ ಮುಂಚೆನೇ ಈ ಜೋಡಿ ಸಖತ್ ಫೇಮಸ್ ಮತ್ತು ವೈರಲ್ ಕೂಡ ಆಗಿತ್ತು. ಬಹಿರಂಗವಾಗಿಯೇ ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ