Breaking News

ಭಾರತಕ್ಕೆ ನಕಲಿ ನೋಟು ತಲುಪಿಸುತ್ತಿದ್ದ ಪಾಕಿಸ್ತಾನ ಐಎಸ್‌ ಐ ಏಜೆಂಟ್‌ ನೇಪಾಳದಲ್ಲಿ ಹತ್ಯೆ!

Spread the love

ಭಾರತಕ್ಕೆ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳ ಸರಬರಾಜು ಮಾಡುತ್ತಿದ್ದ ಪಾಕಿಸ್ತಾನದ ಐಎಸ್‌ ಐ ಏಜೆಂಟ್‌ ನೇಪಾಳದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಗೊಳಗಾಗಿದ್ದಾನೆ.

ಐಎಸ್‌ ಐ ಏಜೆಂಟ್‌ ಲಾಲ್‌ ಮೊಹಮದ್‌ (55) ಅಲಿಯಾಸ್‌ ಮೊಹಮದ್‌ ಧೀರಜ್ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸೆಪ್ಟೆಂಬರ್‌ 19ರಂದು ಹತ್ಯೆಗೊಳಗಾಗಿದ್ದಾನೆ.

ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಸಿಸಿಟಿವಿ ದೃಶ್ಯಗಳು ಭಾರತದ ಮಾಧ್ಯಮಗಳಿಗೆ ಲಭ್ಯವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ತಯಾರಿಸುತ್ತಿದ್ದ ನಕಲಿ ನೋಟುಗಳನ್ನು ನೇಪಾಳಕ್ಕೆ ರವಾನಿಸಿ, ಅಲ್ಲಿಂದ ಭಾರತಕ್ಕೆ ತಲುಪಿಸುವ ಕೆಲಸವನ್ನು ಲಾಲ್‌ ಮೊಹಮದ್‌ ಮಾಡುತ್ತಿದ್ದ.

ಲಾಲ್‌ ಮೊಹಮದ್‌ ಕೇವಲ ಐಎಸ್‌ ಐ ಏಜೆಂಟ್‌ ಮಾತ್ರ ಆಗಿರಲಿಲ್ಲ. ಬದಲಾಗಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆ ಕೂಡ ಸಂಪರ್ಕ ಹೊಂದಿದ್ದ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ