Breaking News

ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ನಿಮ್ಮ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡಲಿದೆ

Spread the love

ವದೆಹಲಿ: ಹೊಸ ಸೋವಾ ಆಂಡ್ರಾಯ್ಡ್ ಟ್ರೋಜನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ಗುರಿಯಾಗಿಸಲಾಗುತ್ತಿದೆ ಅಂತ ಸಿಇಆರ್ಟಿ-ಇನ್ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಅಂತ ಹೇಳಿದೆ.

ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಈ ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ವೈರಸ್ ಸೋವಾ ಒಂದು ರಾನ್ಸಮ್ವೇರ್ ಆಗಿದೆ ಎನ್ನಲಾಗಿದೆ.

ಇದು ಆಂಡ್ರಾಯ್ಡ್ ಫೋನ್ ಫೈಲ್ಗಳನ್ನು ಹಾನಿಗೊಳಿಸುತ್ತದೆ ಮತ್ತು ಅಂತಿಮವಾಗಿ ಸಂಬಂಧಿಸಿದ ವ್ಯಕ್ತಿಯು ಆರ್ಥಿಕ ವಂಚನೆಗೆ ಬಲಿಯಾಗಬಹುದು ಎನ್ನಲಾಗಿದೆ ಈ ವೈರಸ್‌ ಒಮ್ಮೆ ಮೊಬೈಲ್ ಗೆ ಬಂದಾಗ, ಅದನ್ನು ತೆಗೆದುಹಾಕುವುದು ಸಹ ತುಂಬಾ ಕಷ್ಟ. ದೇಶದ ಸೈಬರ್ ಭದ್ರತಾ ಸಂಸ್ಥೆ ತನ್ನ ಇತ್ತೀಚಿನ ಸಲಹೆಯಲ್ಲಿ ಇದನ್ನು ಹೇಳಿದೆ. ಜುಲೈನಲ್ಲಿ ಭಾರತೀಯ ಸೈಬರ್ ಕ್ಷೇತ್ರದಲ್ಲಿ ಈ ವೈರಸ್ ಮೊದಲ ಬಾರಿಗೆ ಪತ್ತೆಯಾಗಿತ್ತು. ಅಂದಿನಿಂದ ಅದರ ಐದನೇ ಆವೃತ್ತಿ ಬಂದಿದೆ ಎನ್ನಲಾಗಿದೆ.

‘ಹೊಸ ಸೋವಾ ಆಂಡ್ರಾಯ್ಡ್ ಟ್ರೋಜನ್ ಮೂಲಕ ಭಾರತೀಯ ಬ್ಯಾಂಕಿನ ಗ್ರಾಹಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ಸಂಸ್ಥೆಗೆ ತಿಳಿಸಲಾಗಿದೆ’ ಎಂದು ಸಿಇಆರ್ಟಿ-ಇನ್ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ತಿಳಿಸಿದೆ. ಇದರಲ್ಲಿ ಮೊಬೈಲ್ ಬ್ಯಾಂಕಿಂಗ್ ಅನ್ನು ಗುರಿಯಾಗಿಸಲಾಗುತ್ತಿದೆ ಎನ್ನಲಾಗಿದೆ. ಲ್ವೇರ್ ಈ ಮೊದಲು ಯುಎಸ್, ರಷ್ಯಾ ಮತ್ತು ಸ್ಪೇನ್ನಂತಹ ದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿತ್ತು, ಆದರೆ ಜುಲೈ 2022 ರಲ್ಲಿ, ಇದು ಭಾರತ ಸೇರಿದಂತೆ ಇತರ ಹಲವಾರು ದೇಶಗಳನ್ನು ಗುರಿಯಾಗಿಸಲು ಪ್ರಾರಂಭಿಸಿತು ಎನ್ನಲಾಗಿದೆ.


Spread the love

About Laxminews 24x7

Check Also

ಉಪಚುನಾವಣೆಯಲ್ಲಿ ಮೇಟಿ ಕುಟುಂಬದವರಿಗೆ ಟಿಕೆಟ್

Spread the loveಬೆಳಗಾವಿ: ‘ಕಾಂಗ್ರೆಸ್ ಶಾಸಕ ಎಚ್‌.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ