Breaking News

ಗದಗ: ಹೊಟ್ಟೆಯೊಳಗೆ ಬೆಳೆದ ಬೃಹತ್ ಗಡ್ಡೆ, ವೃದ್ಧನ ನರಕಯಾತನೆ

Spread the love

ಗದಗ : ವೃದ್ಧರೊಬ್ಬರ ಹೊಟ್ಟೆಯಲ್ಲಿ ಗಡ್ಡೆ ಬೆಳೆದು ಅವರು ನಡೆಯಲಾರದ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಬುಲ್ಡೋಜರ್ ನಗರ ನಿವಾಸಿ ಹನುಮಂತಪ್ಪ (69) ತಮ್ಮ ಹೊಟ್ಟೆಯಲ್ಲಿರುವ ಈ ಗಡ್ಡೆಯಿಂದಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಅಲೆಮಾರಿ ಜನಾಂಗದವರಾದ ಇವರು ಕಳೆದ ಹಲವು ವರ್ಷಗಳಿಂದ ಈ ರೋಗಕ್ಕೆ ತುತ್ತಾಗಿದ್ದಾರೆ. ಗಡ್ಡೆ ದೊಡ್ಡದಾಗಿ ಹೊಟ್ಟೆಯೊಳಗಿನಿಂದ ಜೋತು ಬಿದ್ದಿದೆ. ಯಾವುದೇ ನೋವು ಇಲ್ಲದಿದ್ದರೂ ಓಡಾಡಲು ಇವರಿಗೆ ಕಷ್ಟವಾಗುತ್ತಿದೆ. ಸದ್ಯ ಪತ್ನಿಯೇ ಇವರಿಗೆ ಆಧಾರ. ದುಡಿದು ಸಾಕಲು ಮಕ್ಕಳಿಲ್ಲ. ಸರ್ಕಾರ ನೀಡುವ ಪಡಿತರ ಅಕ್ಕಿಯಿಂದ ಜೀವನ ನಡೆಸುತ್ತಿದ್ದಾರೆ.

ಕಾಯಿಲೆಗೆ ಚಿಕಿತ್ಸೆ ಮಾಡೋಣವೆಂದರೆ ಆಸ್ಪತ್ರೆಯಲ್ಲಿ ಹಣ ಭರಿಸುವ ಶಕ್ತಿ ಇವರಿಗಿಲ್ಲ. ಮಕ್ಕಳ ಮನರಂಜನೆಯ ‘ಗರ್ದಿ ಗಮ್ಮತ್ತು’ (ಬಯೋಸ್ಕೋಪ್) ನಡೆಸುತ್ತಿದ್ದ ಹನುಮಂತಪ್ಪನವರೀಗ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಇದ್ದಾರೆ. ದಾನಿಗಳು ಹಾಗು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕುಟುಂಬ ಸಹಾಯ ಯಾಚಿಸಿದೆ.


Spread the love

About Laxminews 24x7

Check Also

ಗ್ಯಾರಂಟಿ’ಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ನಿಜ, ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅಪಸ್ವರ ಎತ್ತಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ