Breaking News

ಅಮಾಯಕರನ್ನು ಬಂಧಿಸಿದರೆ 5 ಲಕ್ಷ ರೂ. ಪರಿಹಾರ; ಪೊಲೀಸ್ ಅಧಿಕಾರಿಯೇ ಕೊಡಬೇಕು; ಹೈಕೋರ್ಟ್

Spread the love

ಬೆಂಗಳೂರು: ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದರೆ ಅದಕ್ಕೆ ಪೊಲೀಸರೇ ಜವಾಬ್ದಾರರಾಗಿದ್ದು, ವ್ಯಕ್ತಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನಿಂಗರಾಜು ಎನ್ ಎಂಬ ಅಮಾಯಕರೊಬ್ಬರನ್ನು ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಇಂತದ್ದೊಂದು ಮಹತ್ವದ ತೀರ್ಪು ಪ್ರಕಟಿಸಿದೆ.

 

ಓರ್ವ ವ್ಯಕ್ತಿ ಮೇಲೆ ಯಾವುದೇ ರೀತಿಯ ಆಪಾದನೆ ವಾರಂಟ್ ಹೊರಡಿಸಿದಾಗ ಜಾಮೀನು ಅಥವಾ ಜಾಮೀನು ರಹಿತವಾಗಿದ್ದರೂ ಬಂಧಿತ ವ್ಯಕ್ತಿ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದ್ದು ಪೊಲೀಸರ ಜವಾಬ್ದಾರಿ. ಪ್ರಸ್ತುತ ಪ್ರಕರಣದಲ್ಲಿ ಗೊಂದಲ ಆಗಿರುವ ಹಿನ್ನೆಲೆಯಲ್ಲಿ ಅಕ್ರಮ ಬಂಧನಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರವನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ ನೀಡುವಂತೆ ಸೂಚನೆ ನೀಡಿದೆ.


Spread the love

About Laxminews 24x7

Check Also

ಜೂನ್ 20-21ಕ್ಕೆ ಮತ್ತೆ 6 ಜಿಲ್ಲೆಗಳಿಗೆ ಮುಂಗಾರು ಚುರುಕು – ಯೆಲ್ಲೋ ಅಲರ್ಟ್

Spread the loveಜೂನ್ 20 ಹಾಗೂ 21 ರಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿಗೆ ಭಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ