Breaking News

ಪೆನ್ಸಿಲ್ & ಮ್ಯಾಗಿ ಬೆಲೆ ದುಬಾರಿಯಾಗಿದ್ದಕ್ಕೆ ಸಿಟ್ಟಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ 6 ವರ್ಷದ ಬಾಲಕಿ!

Spread the love

ಒಂದನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಸಂಕಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಈ ಪತ್ರ ಬರೆದಿದ್ದಾಳೆ.

ಇದರಲ್ಲಿ ‘ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದಿರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್) ಸಹ ದುಬಾರಿಯಾಗಿದೆ ಮತ್ತು ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ. ಈಗ ನನ್ನ ತಾಯಿ ಪೆನ್ಸಿಲ್ ಕೇಳಿದ್ದಕ್ಕಾಗಿ ನನ್ನನ್ನು ಹೊಡೆಯುತ್ತಾರೆ. ನಾನೇನು ಮಾಡಲಿ? ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್‌ಅನ್ನು ಕದಿಯುತ್ತಾರೆ’ ಎಂದು ಬಾಲಕಿ ದೂರಿದ್ದಾಳೆ. ಹಿಂದಿಯಲ್ಲಿ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಕೀಲರಾಗಿರುವ ಬಾಲಕಿಯ ತಂದೆ ವಿಶಾಲ್ ದುಬೆ, ಇದು ನನ್ನ ಮಗಳ ‘ಮನ್ ಕಿ ಬಾತ್’ ಆಗಿದೆ. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ತಾಯಿ ಅವಳನ್ನು ಗದರಿಸಿದಾಗ ಅವಳು ಸಿಟ್ಟಾಗಿ ಈ ರೀತಿಯ ಪತ್ರ ಬರೆದಿದ್ದಾಳೆ ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ