Breaking News

ಆನಂದ್ ಸಿಂಗ್ ಗೆ ತವರು ಜಿಲ್ಲೆ ಉಸ್ತುವಾರಿ ನೀಡಿ ವಾಪಸ್ ಪಡೆದ ರಾಜ್ಯ ಸರ್ಕಾರ!

Spread the love

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆನಂದ್ ಸಿಂಗ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಶಿಕಲಾ ಜೊಲ್ಲೆ ನೇಮಿಸಿ ಆದೇಶಿಸಲಾಗಿತ್ತು. ಆದ್ರೇ.. ಈ ಆದೇಶವನ್ನು ರದ್ದು ಮಾಡಿಲಾಗಿದೆ.

ಈ ಮೂಲಕ ಆನಂದ್ ಸಿಂಗ್ ಗೆ ಬಿಗ್ ಶಾಕ್ ನೀಡಲಾಗಿದೆ.

 

ರಾಜ್ಯ ಸರ್ಕಾರದಿಂದ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದಂತ ಆನಂದ್ ಸಿಂಗ್ ಬದಲಾವಣೆ ಮಾಡಿ, ವಿಜಯನಗರ ಜಿಲ್ಲೆಗೆ ನೇಮಿಸಿ ನಿನ್ನೆ ಆದೇಶ ಹೊರಡಿಸಲಾಗಿತ್ತು. ಕೊಪ್ಪಳ ಜಿಲ್ಲೆಗೆ ಶಶಿಕಲಾ ಜೊಲ್ಲೆ ನೇಮಿಸಲಾಗಿತ್ತು. ಆದ್ರೇ.. ಸ್ವಂತ ಜಿಲ್ಲೆಗೆ ಉಸ್ತುವಾರಿಗಳನ್ನು ನೇಮಕ ಮಾಡುವಂತಿಲ್ಲ ಎಂಬುದಾಗಿ ಬಿಜೆಪಿ ಹೈಕಮಾಂಡ್ ಖಡಕ್ ಸೂಚನೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಹೊರಡಿಸಿದ್ದಂತ ಆದೇಶವನ್ನು ಸಂಜೆ ರದ್ದು ಮಾಡಲಾಗಿದೆ.

 

ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಆದೇಶ ರದ್ದು ಮಾಡಲಾಗಿದ್ದು, ಇದೀಗ ವಿಜಯನಗರಕ್ಕೆ ಶಶಿಕಲಾ ಜೊಲ್ಲೆ, ಕೊಪ್ಪಳಕ್ಕೆ ಆನಂದ್ ಸಿಂಗ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರೆಸಿ, ಆದೇಶಸಿಲಾಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ