Breaking News

ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ ನೀಡಿದ ಮಹೇಶ ಕುಮಠಳ್ಳಿ. ಲಕ್ಷ್ಮಣ ಸವದಿ,

Spread the love

ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡುವ ದೃಷ್ಟಿಯಿಂದ ಕೃಷಿ ಇಲಾಖೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದರು.

ಅವರು ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಗಳಿಗೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರ ಜೊತೆಗೂಡಿ ಚಾಲನೆ ನೀಡಿ, ಮಾತನಾಡುತ್ತಾ ‘ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮತ್ತು ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಕೃಷಿ ಇಲಾಖೆ ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ‘ಕೃಷಿ ಅಭಿಯಾನದ ರಥ ಪ್ರತಿ ಹಳ್ಳಿಗೂ ಸಂಚರಿಸಿ ಕೃಷಿಕರಿಗೆ ಇಲಾ ಖೆಯ ಸಮಗ್ರ ಮಾಹಿತಿ ನೀಡಬೇಕು.

ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಬೇಸಾಯ ಪದ್ಧತಿ, ಬಿತ್ತನೆ ಬೀಜ, ಸಸಿ ಮಡಿಗಳನ್ನು ಹದಗೊಳಿಸುವಿಕೆ, ಭೂಮಿಗೆ ನೀಡಬೇಕಾದ ಸಾರಜನಕ, ರಂಜಕ, ಕೊಟ್ಟಿಗೆ ಗೊಬ್ಬರ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎನ್ನುವುದು ರೈತರಿಗೆ ತಿಳಿಸಬೇಕು’ ಎಂದರು.


Spread the love

About Laxminews 24x7

Check Also

ಸೌರ ಘಟಕಕ್ಕಾಗಿ ಮರ ಕಟಾವಿಗೆ ಆಕ್ರೋಶ

Spread the loveಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಸೌರ ವಿದ್ಯುತ ಘಟಕಕ್ಕಾಗಿ ಶ್ರೀಗಂಧ ಸಹಿತ ವಿವಿಧ ಮರಗಳನ್ನು ಅನಧಿಕೃತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ