Breaking News

ಅಯೋಧ್ಯೆಯ ನದಿಯಲ್ಲಿ ಸ್ನಾನ ಮಾಡ್ತಿದ್ದಾಗ ದಂಪತಿ ಕಿಸ್ಸಿಂಗ್;

Spread the love

ಅಯೋಧ್ಯೆಯಲ್ಲಿ ಗಂಡ-ಹೆಂಡತಿ ಸ್ನಾನ ಮಾಡುವ ವೇಳೆ ಕಿಸ್ ಮಾಡಿಕೊಂಡಿದ್ಕೆ ಕೋಪಿತಗೊಂಡ ಜನಸಮೂಹ, ವ್ಯಕ್ತಿಗೆ ಹಲ್ಲೆ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ..?
ಸರಯೂ ನದಿಯಲ್ಲಿ ಸಾರ್ವಜನಿಕರ ಮಧ್ಯೆ ದಂಪತಿಯೊಂದು ಸ್ನಾನ ಮಾಡುತ್ತ ಇರುತ್ತದೆ.

ಈ ವೇಳೆ ತನ್ನ ಪತಿಗೆ ಮಹಿಳೆ ಕಿಸ್ ಮಾಡುತ್ತಾಳೆ. ಇದನ್ನ ಗಮನಿಸಿದ ಅಲ್ಲಿದ್ದವರೊಬ್ಬರು, ಆ ವ್ಯಕ್ತಿ ಕೈಹಿಡಿದು ಎಳೆದು ಹೊಡೆಯುತ್ತಾರೆ. ನಂತರ ನದಿಯಿಂದ ಮೇಲಕ್ಕೆ ಕರೆದುಕೊಂಡು ಬಂದು ಎಲ್ಲರೂ ಥಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಎಸ್​ಪಿ ಶೈಲೇಶ್ ಪಾಂಡೇ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ವಾರದ ಹಿಂದಿನದು. ಹಲ್ಲೆಗೊಳಗಾದವರು ಯಾವುದೇ ದೂರನ್ನ ನಮಗೆ ನೀಡಿಲ್ಲ. ಪೊಲೀಸರು ದಂಪತಿಯನ್ನ ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಒಂದು ವೇಳೆ ಅವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ