Breaking News

ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಬೋಲ್ಡೊಜರ್ ಸದ್ದು: ಅಕ್ರಮ ಮನೆಗಳ ನೆಲಸಮ

Spread the love

ಕಲಬುರಗಿ‌: ನಗರದ ಜಾಫರಾಬಾದ್ ಪ್ರದೇಶದಲ್ಲಿ ‌ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ‌ನಿರ್ಮಿಸಲಾಗಿರುವ ಮನೆಗಳನ್ನು ಇಂದು ಬೆಳಗಿನ‌ ಜಾವ ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸುವ ‌ಮೂಲಕ ಅಕ್ರಮ ಮನೆಗಳನ್ನು ನೆಲಸಮ‌ ಮಾಡಲಾಗುತ್ತಿದೆ.

 

ಇಂದು ಬೆಳ್ಳಂಬೆಳಗ್ಗೆ ಪೊಲೀಸ್ ಬಲದೊಂದಿಗೆ ತೆರಳಿದ ಜಿಲ್ಲಾಧಿಕಾರಿ ಯಶ್ವಂತ ಗುರುಕರ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ತಹಶೀಲ್ದಾರ ಪ್ರಕಾಶ ಕುದುರೆ, ಪಾಲಿಕೆ ಅಧಿಕಾರಿಗಳು ಹಾಗೂ ಇತರರು ಸೇರಿಕೊಂಡು ಕಾರ್ಯಾಚರಣೆ ಶುರುವಿಟ್ಟಿದ್ದಾರೆ.

ಬೆಳಗಿನ ಜಾವ ನಾಲ್ಕು ಗಂಟೆಗೆ ಜೆಸಿಬಿ ಮೂಲಕ ಅಕ್ರಮ ಮನೆಗಳನ್ನು ನೆಲಸಮಗೊಳಿಸಲಾಯಿತು.

ಸುಮಾರು 20 ಎಕರೆ ಪ್ರದೇಶವನ್ನು ‌ಕೆಲವರು ಒತ್ತುವರಿ ಮಾಡಿಕೊಂಡು ‌ಮನೆ ಇನ್ನಿತರ ಕಟ್ಟಡ ನಿರ್ಮಿಸಿದ್ದಾರೆ. ಹಲವು ಸಲ ನೋಟೀಸ್ ನೀಡಲಾಗಿದ್ದರೂ ತೆರವು ಮಾಡದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.‌


Spread the love

About Laxminews 24x7

Check Also

ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡ್ತೀವಿ: ಸಿದ್ದರಾಮಯ್ಯ

Spread the loveರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಹಳ ಹೆಚ್ಚು ಅಂದ್ರೆ ಎರಡು ತಿಂಗಳಾಗಬಹುದು ಎಂದು ಮುಖ್ಯಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ