Breaking News

ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

Spread the love

ಧಾರವಾಡ: ರಾಜ್ಯದಲ್ಲಿ ಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಶ್ರೀರಾಮಸೇನೆ ಸಜ್ಜಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಮೈಕ್ ತೆರವು ವಿಳಂಬವಾಗಿರೋದ್ರಿಂದ ಇವತ್ತು ಬಿಜೆಪಿ ಮುಖಂಡರ ಮನೆ ಮುಂದೆ ಪ್ರತಿಭಟನೆ ಆಯೋಜಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿಗೆ ಶ್ರೀರಾಮಸೇನೆ ಕರೆ ಕೊಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಗೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ಕೊಟ್ಟಿವೆ.

ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಧರಣಿಯಲ್ಲಿ ಭಾಗವಹಿಸುವಂತೆ ಶ್ರೀರಾಮಸೇನೆಯ ಸದಸ್ಯರಿಗೆ, ಪದಾಧಿಕಾರಿಗಳಿಗೆ, ಹಿಂದೂಪರ ಸಂಘಟನೆ ಮತ್ತು ಹಿಂದೂಗಳಿಗೆ ಸಂದೇಶ ರವಾನಿಸಲಾಗಿದೆ. ಈ ಬಗ್ಗೆ ಜೂನ್ 2ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುತಾಲಿಕ್ ಮಾಹಿತಿ ಕೊಟ್ಟಿದ್ದರು. ಜೂನ್ 8ರಂದು ಬಿಜೆಪಿ ಎಂಎಲ್‍ಎಗಳ ಕಚೇರಿ ಮುಂದೆ ಧರಣಿ ಕೂರುವ ಬಗ್ಗೆ ಎಚ್ಚರಿಸಿದ್ದರು.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ