ಬೆಳಗಾವಿ ಗ್ರಾಮೀಣ ಪದೇಶದ ವಾಘವಾಡೆ ಗ್ರಾಮದ ಶ್ರೀ ರವಳನಾಥ ಮಂದಿರದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಳ್ಳುವ ಮೂಲಕ ಸಹೋದರ ವಿಧಾನ ಪರಿಷತ್ ಸದಸ್ಯ Channaraj Hattiholi ಜೊತೆ ಸೇರಿ ಚಾಲನೆಯನ್ನು ನೀಡಲಾಯಿತು.
ಈ ಜೀರ್ಣೋದ್ಧಾರದ ಕಾಮಗಾರಿಗಳ ಮೂಲಕ ದೇವಸ್ಥಾನಕ್ಕೆ ಹೊಸ ಹೊಳಪು ಬರಲಿದ್ದು, ಇದರಿಂದಾಗಿ ಗ್ರಾಮದ ಮನೆ ಮನಗಳಿಗೆ ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ದೊರಯಲಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ್ಯಾಂತ ಶಿಥಿಲಾವಸ್ಥೆಯಲ್ಲಿರುವ ಎಲ್ಲ ದೇವಸ್ಥಾನ ಮಾಹಿತಿಯನ್ನು ಕಲೆಹಾಕಿ ದೇವಸ್ಥಾನಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರದ ಕೆಲಸ ಕಾರ್ಯಗಳಿಗೆ ಉತ್ಸುಕಳಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜಣ್ಣ ಕದಂ, ಬಾಲಕೃಷ್ಣ ಗೋಡ್ಸೆ, ತುಶಾರ್ ತಹಶಿಲ್ದಾರ, ಸಚಿನ ಸಾಮಜಿ, ದೇವಸ್ಥಾನ ಟ್ರಸ್ಟ್ ಕಮೀಟಿಯ ಅಧ್ಯಕ್ಷ ಕಲ್ಲಪ್ಪ ಗುರವ, ರಘುನಾಥ್ ಪಾಟೀಲ, ಬಾವುಕಣ್ಣ ಪಾಟೀಲ, ಶುಭಾಂಗಿ ದೇಸಾಯಿ, ವೈಶಾಲಿ ಕಾಂಬಳೆ, ಸಂತೋಷ ಅಂಬೋಳ್ಕರ್, ರಘುನಾಥ್ ನಾಯಿಕ್, ಪಲ್ಲವಿ ನಾಯಿಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7