ಹಾಸನ: ಪ್ರಜ್ವಲ್ ಅವರಿಗೆ, ಪ್ರಜ್ವಲ್ ಅವರಿಗೆ ಎಂದು ಎಷ್ಟು ಸಲ ಕೂಗುತ್ತೀರಾ ನಾನು ಇಲ್ಲೇ ಇದ್ದೀನಿ ಒಬ್ಬನಾದ್ರೂ ಜೈ ಕಾರ ಹಾಕೋದು ಬೇಡ್ವಾ ಎಂದು ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಜಾನಳ್ಳಿಯಿಂದ ಒಬ್ಬ ಹುಡುಗ ಬಂದಿದ್ದಾನೆ.
ಶಿವಲಿಂಗೇಗೌಡನಿಗೆ ಜೈ ಅಂದ್ರೆ ನಿನ್ನ ಗಂಟು ಹೋಗ್ಬಿಡುತ್ತಾ, ನಿಮ್ಮ ಪಿಎ ಒಬ್ಬ ಇದ್ದಾನೆ ಬೇಜಾರು ಮಾಡ್ಕೋಬೇಡಿ. ಅವನು ಹತ್ತು ಹುಡುಗರು ಕಟ್ಟಿಕೊಂಡು ಎಲ್ಲಿ ಹೋದರೂ ಹೀಗೆ ಕೂಗಿಸುತ್ತಾನೆ ಯಾಕೆ ಎಂದು ಪ್ರಜ್ವಲ್ ವಿರುದ್ಧವೇ ಗರಂ ಆದರು.
Laxmi News 24×7