Breaking News

ಮಂಗಳವಾರ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 2,323 ವಿದ್ಯಾರ್ಥಿಗಳು ಗೈರುಹಾಜರ

Spread the love

ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 2,323 ವಿದ್ಯಾರ್ಥಿಗಳು ಗೈರುಹಾಜರಾದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಭೌತವಿಜ್ಞಾನ ವಿಷಯ ಪರೀಕ್ಷೆಗೆ 5,764 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಈ ಪೈಕಿ 5,612 ವಿದ್ಯಾರ್ಥಿಗಳು ಹಾಜರಾದರು. 152 ವಿದ್ಯಾರ್ಥಿಗಳು ಬರಲಿಲ್ಲ.

ಇತಿಹಾಸ ವಿಷಯಕ್ಕೆ ನೋಂದಾಯಿಸಿದ್ದ 12,210 ವಿದ್ಯಾರ್ಥಿಗಳ ಪೈಕಿ 11,308 ವಿದ್ಯಾರ್ಥಿಗಳು ಹಾಜರಾದರು. 902 ವಿದ್ಯಾರ್ಥಿಗಳು ಗೈರುಹಾಜರಾದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಭೌತವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ್ದ 6,642 ವಿದ್ಯಾರ್ಥಿಗಳ ಪೈಕಿ 6,462 ವಿದ್ಯಾರ್ಥಿಗಳು ಹಾಜರಾದರು. 180 ವಿದ್ಯಾರ್ಥಿಗಳು ಗೈರುಹಾಜರಾದರು. ಇತಿಹಾಸಕ್ಕೆ 17,265 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 16,536 ಮಂದಿ ಹಾಜರಾದರು. 1,089 ವಿದ್ಯಾರ್ಥಿಗಳು ದೂರ ಉಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಲೋಕಸಭಾ ಕ್ಷೇತ್ರದ 28 ಶಾಲೆಗಳು ಕೇಂದ್ರದ ‘ಪಿಎಂ-ಶ್ರೀ’ ಯೋಜನೆಗೆ ಆಯ್ಕೆ – ಸಂಸದ ಈರಣ್ಣ ಕಡಾಡಿ

Spread the loveಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಪಿಎಂ-ಶ್ರೀ’ ಯೋಜನೆಯಡಿ ಬೆಳಗಾವಿ ಲೋಕಸಭಾ ಕ್ಷೇತ್ರದ 21 ಪ್ರಾಥಮಿಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ