Breaking News

ಅರ್ಧ ದಾರಿಯಲ್ಲಿ ರೈಲು ನಿಲ್ಲಿಸಿ ಎಣ್ಣೆ ಹೊಡೆಯಲು ಹೋದ ಚಾಲಕ : ಗಂಟೆಗಟ್ಟಲೆ ಕಾದ ಪ್ರಯಾಣಿಕರು

Spread the love

ಬಿಹಾರ: ರೈಲಿನ ಲೊಕೊ ಪೈಲಟ್ ( ಚಾಲಕ) ಅರ್ಧ ದಾರಿಯಲ್ಲಿ ರೈಲು ನಿಲ್ಲಿಸಿ ಟೀ ಕುಡಿಯಲು ತೆರಳಿದ ಸುದ್ದಿ ಇತ್ತೀಚಿಗೆ ವರದಿಯಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ಇಲ್ಲಿ ಬೇಜವಾಬ್ದಾರಿ ಲೊಕೊ ಪೈಲಟ್ ಅರ್ಧ ದಾರಿಯಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ನಿಲ್ಲಿಸಿ ಮದ್ಯ ಸೇವಿಸಲು ತೆರಳಿದ್ದಾನೆ.

ಬಿಹಾರದ ಸಮಸ್ತಿಪುರ್-ಖಗಾರಿಯಾ ನಡುವಿನ ರೈಲು ಮಾರ್ಗದ ಹಸನ್‌ಪುರ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ನಿಲ್ದಾಣದಲ್ಲಿ ನಿಂತ ರೈಲು ಎಷ್ಟೇ ಹೊತ್ತಾದರೂ ಹೊರಡ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇಳೆ ರೈಲಿನ ಲೋಕೋ ಪೈಲೆಟ್ ರೈಲು ನಿಲ್ಲಿಸಿ ಎಲ್ಲೋ ಹೋಗಿರುವುದು ಗೊತ್ತಾಗಿದೆ. ರೈಲ್ವೆ ಅಧಿಕಾರಿಗಳು ಆತನಿಗಾಗಿ ಹುಡುಕಾಟ ಆರಂಭಿಸಿದಾಗ, ನಿಲ್ದಾಣದ ಹಿಂಬದಿ ಲೋಕೋ ಪೈಲೆಟ್ ಎಣ್ಣೆ ಮತ್ತಿನಲ್ಲಿ ಬಿದ್ದಿದ್ದ. ಆತನ ಕೈಯಲ್ಲಿ ಅರ್ಧ ಕುಡಿದ ಮದ್ಯದ ಬಾಟಲಿ ಕೂಡ ಇತ್ತು. ತಕ್ಷಣ ರೈಲು ಹೊರಡಲು ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡಿದರು. ರೈಲ್ವೆ ಪೊಲೀಸರು ಎಣ್ಣೆ ಮತ್ತಿನಲ್ಲಿದ್ದ ಲೋಕೋ ಪೈಲೆಟ್ ಅನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಿ ಮೂರು ವರ್ಷ ಕಳೆದಿದೆ. ಆದರೆ, ರೈಲು ಚಾಲಕ ನಿಲ್ದಾಣ ಬಳಿಯೇ ಎಣ್ಣೆ ಹಾಕಿ ಬಾಟಲಿ ಸಮೇತ ಮಲಗಿದ್ದ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ