ಸಾವಿರ ಕೋಟಿ ಕ್ಲಬ್‌ಗ ಕನ್ನಡದ ಕೆಜಿಎಫ್-2;

Spread the love

ಬೆಂಗಳೂರು: ನಿರೀಕ್ಷೆಯಂತೆಯೇ ಯಶ್‌ ನಟನೆಯ “ಕೆಜಿಎಫ್-2′ ಚಿತ್ರ ಒಂದು ಸಾವಿರ ಕೋಟಿ ರೂ.ಕಲೆಕ್ಷನ್‌ ಮಾಡಿದ್ದು, ಈ ಸಾಧನೆ ಮಾಡಿರುವ ಮೊದಲ ಕನ್ನಡ ಮೊದಲ ಹಾಗೂ ಭಾರತೀಯ ಚಿತ್ರರಂಗದ ನಾಲ್ಕನೇ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಬಿಡುಗಡೆಯಾದ ದಿನದಿಂದಲೇ ಕಲೆಕ್ಷನ್‌ನಲ್ಲಿ ನಾಗಾಲೋಟದಲ್ಲೇ ಸಾಗಿದ “ಕೆಜಿಎಫ್-2′ 15ನೇ ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಅತಿ ವೇಗದಲ್ಲಿ ಸಾವಿರ ಕೋಟಿ ಕ್ಲಬ್‌ ಸೇರಿದೆ. ಗುರುವಾರದ ವೇಳೆಗೆ ಚಿತ್ರದ ಜಾಗತಿಕ ಕಲೆಕ್ಷನ್‌ 997 ಕೋಟಿ ರೂ. ದಾಟಿದ್ದು, ಶುಕ್ರವಾರದ ಸಾವಿರ ಕೋಟಿ ರೂಪಾಯಿಯ ಸಾಧನೆ ಮಾಡಿತು.

ಈಗಾಗಲೇ ಒಂದು ಸಾವಿರ ಕೋಟಿ ರೂ. ಕಲೆಕ್ಷನ್‌ ಮಾಡಿರುವ ಭಾರತೀಯ ಸಿನೆಮಾಗಳಲ್ಲಿ “ಕೆಜಿಎಫ್-2′ ನಾಲ್ಕನೇ ಚಿತ್ರ. “ದಂಗಲ್‌’, “ಬಾಹುಬಲಿ-2′ ಹಾಗೂ “ಆರ್‌ಆರ್‌ಆರ್‌’ ಚಿತ್ರ ಬಿಟ್ಟರೆ ಸಾವಿರ ಕೋಟಿ ಕ್ಲಬ್‌ ಸೇರಿದ ಹೆಗ್ಗಳಿಕೆ “ಕೆಜಿಎಫ್-2’ನದ್ದು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ