ಉರ್ಫಿ ಜಾವೇದ್ ಅವರ ಫೋಟೋ ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಆದಾಗ ಅವರನ್ನು ಇಡೀ ಊರಿನವರು ಹಾಗೂ ಕುಟುಂಬದವರು ಅವಮಾನಿಸಿದ್ದರು. ಆ ಘಟನೆ ಕುರಿತು ಉರ್ಫಿ ಮಾತನಾಡಿದ್ದಾರೆ.ನಟಿ ಉರ್ಫಿ ಜಾವೇದ್ (Urfi Javed) ಅವರು ಪ್ರತಿ ದಿನವೂ ಸುದ್ದಿ ಆಗುತ್ತಿದ್ದಾರೆ.
ಒಂದಿಲ್ಲೊಂದು ಕಾರಣಕ್ಕೆ ಅವರ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ವಿಚಿತ್ರ ಬಟ್ಟೆ ಧರಿಸಿ ಹೊರಬರುವ ಮೂಲಕ ಅವರು ಫೇಮಸ್ ಆಗಿದ್ದಾರೆ. ಈ ಕಾರಣಕ್ಕಾಗಿ ನೆಟ್ಟಿಗರು ಎಷ್ಟೇ ಟ್ರೋಲ್ (Urfi Javed Troll) ಮಾಡಿದರೂ ಆ ಬಗ್ಗೆ ಉರ್ಫಿ ಜಾವೇದ್ ತಲೆ ಕೆಡಿಸಿಕೊಂಡಿಲ್ಲ. ಆದರೆ ಒಂದು ವಿಷಯದಿಂದ ಅವರು ಚಿಂತೆಗೆ ಒಳಗಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಅವರು ಬಂದಿದ್ದರು. ಪ್ರತಿ ದಿನ ಅವರಿಗೆ ರೇಪ್ (Rape) ಬೆದರಿಕೆ ಬರುತ್ತವೆ. ಆ ಎಲ್ಲ ಘಟನೆಗಳ ಕುರಿತು ಈಗಉರ್ಫಿ ಜಾವೇದ್ಅವರು ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಕಿ ಆಗಿದ್ದಾಗಲೇ ಅವರಿಗೆ ಸೈಬರ್ ಲೋಕದಲ್ಲಿ ಕಿರುಕುಳ ಎದುರಾಗಿತ್ತು. ಅದರಿಂದ ಅವರು ಎದುರಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಅದಕ್ಕೆಲ್ಲ ಕಾರಣ ಆಗಿದ್ದು ಅವರ ಒಂದು ಫೋಟೋ. ಆ ಬಗ್ಗೆ ವಿವರ ಇಲ್ಲಿದೆ.
‘ಆಗ ನನಗೆ ಇನ್ನೂ 15ರ ಪ್ರಾಯ. ನಾವು ಲಖನೌನಲ್ಲಿ ವಾಸವಾಗಿದ್ದೆವು. ಒಂದು ಆಫ್ ಶೋಲ್ಡರ್ ಉಡುಗೆಯನ್ನು ನಾನು ಧರಿಸಿದ್ದೆ. ಆ ಸಮಯದಲ್ಲಿ ಲಖನೌ ಸಮೀಪ ಎಲ್ಲಿಯೂ ಆ ರೀತಿಯ ಬಟ್ಟೆ ಕಾಣಲು ಸಿಗುತ್ತಿರಲಿಲ್ಲ. ಹಾಗಾಗಿ ನನ್ನ ಒಂದು ಟಾಪ್ ಅನ್ನು ಕತ್ತರಿಸಿ ನಾನು ವಿನ್ಯಾಸಗೊಳಿಸಿದ್ದೆ. ಆ ಬಟ್ಟೆ ಧರಿಸಿ ಫೋಟೋ ತೆಗೆದುಕೊಂಡು, ಅದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದೆ. ಅದೇ ಫೋಟೋವನ್ನು ಯಾರೋ ಅಶ್ಲೀಲ ವೆಬ್ಸೈಟ್ನಲ್ಲಿ ಹಾಕಿದ್ದರು’ ಎಂದು ಆ ಕಹಿ ಘಟನೆಯನ್ನು ಉರ್ಫಿ ಜಾವೇದ್ ವಿವರಿಸಿದ್ದಾರೆ.
‘ಆ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದೇ ನನಗೆ ತಿಳಿದಿರಲಿಲ್ಲ. ಅಂಥ ಪರಿಸ್ಥಿತಿ ಬರುವರೆಗೆ ನಾವು ಎಷ್ಟು ಸ್ಟ್ರಾಂಗ್ ಎಂಬುದು ನಮಗೆ ಗೊತ್ತಾಗುವುದಿಲ್ಲ. ಬಂದಿದ್ದನ್ನು ಸ್ವೀಕರಿಸಬೇಕಾ? ಫೈಟ್ ಮಾಡಬೇಕಾ ಅಥವಾ ಸಾಯಬೇಕಾ? ಸಾಯಲು ನನಗೆ ಧೈರ್ಯ ಇರಲಿಲ್ಲ. ಹಾಗಾಗಿ ನಾನು ಫೈಟ್ ಮಾಡಲು ನಿರ್ಧರಿಸಿದೆ’ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.