Breaking News

ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ ಗೌತಮ್‌ ಅದಾನಿ

Spread the love

ನವದೆಹಲಿ: ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಉಳಿದಿಲ್ಲ. ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅದಾನಿ ಆಸ್ತಿಯು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ಆಸ್ತಿಗೆ ಸಮನಾಗಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್(ಶತಕೋಟ್ಯಧಿಪತಿ) ರಿಯಲ್‌ ಟೈಂ ಇಂಡೆಕ್ಸ್ ಪ್ರಕಾರ, ಅದಾನಿ ಮತ್ತು ಬಿಲ್ ಗೇಟ್ಸ್ ಇಬ್ಬರೂ 125 ಬಿಲಿಯನ್ ಡಾಲರ್‌( 9.58 ಲಕ್ಷ ರೂ.)ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಗೌತಮ್ ಅದಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅವರು ಬಿಲ್ ಗೇಟ್ಸ್‌ಗಿಂತ ಸ್ವಲ್ಪ ಹಿಂದೆ ಇದ್ದಾರೆ.

ಗೌತಮ್ ಅದಾನಿ ಅವರ ಸಂಪತ್ತು ಕೇವಲ ಒಂದೇ ದಿನದಲ್ಲಿ 6.3 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. ಅದಾನಿಯವರ ಸಂಪತ್ತು ಈ ಒಂದೇ ವರ್ಷದಲ್ಲಿ 48.3 ಬಿಲಿಯನ್ ಡಾಲರ್‌ ಹೆಚ್ಚಾಗಿದೆ. 2021 ರ ಅಂತ್ಯದ ವೇಳೆಗೆ ಗೌತಮ್ ಅದಾನಿ ಅವರ ಆಸ್ತಿ 76.7 ಬಿಲಿಯನ್ ಡಾಲರ್‌ ಆಗಿತ್ತು. ಅದಾನಿ ಗ್ರೂಪ್ ಆಫ್ ಕಂಪನಿಗಳ ಷೇರು ಬೆಲೆಗಳು ನಿರಂತರವಾಗಿ ಏರುತ್ತಲೇ ಇರುವುದರಿಂದ ಆದಾನಿ ಅವರ ಆಸ್ತಿಯ ಮೌಲ್ಯ ಏರಿಕೆಯಾಗುತ್ತಿವೆ.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ