Breaking News

ವಿಮಾನದಲ್ಲಿ ರಾತ್ರಿ 10ರ ನಂತರ ಹಿಂಬದಿ ಸೀಟಿನಲ್ಲಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ

Spread the love

ಬೆಂಗಳೂರು: ಚೆನ್ನೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಮಹಿಳೆಗೆ ವಿಮಾನದ ಒಳಗಡೆ ಕಿರುಕುಳ ಕೊಟ್ಟು ಇದೀಗ ಜೈಲು ಪಾಲಾಗಿದ್ದಾನೆ. 

ಮಹಿಳೆಯೊಬ್ಬರು ಮಾರ್ಕೆಟಿಂಗ್ ಕೆಲಸಕ್ಕೆಂದು ಚನ್ನೈಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಇದೇ ಏಪ್ರಿಲ್ 18ರ ರಾತ್ರಿ 10 ಗಂಟೆ ಸುಮಾರಿಗೆ ಇಂಡಿಗೋ 6e6225 ವಿಮಾನದಲ್ಲಿ ಮಹಿಳೆ ಬರುತ್ತಿದ್ದಾಗ, ಹಿಂಬದಿ ಸೀಟ್‌ ನಂ-20a ರಲ್ಲಿ‌ ಕುಳಿತಿದ್ದ ಚನ್ನೈ ಮೂಲದ ಕೃಷ್ಣನ್.ಪಿ. ಎಂಬಾತ ಮುಂದಿನ ಸೀಟಿನಲ್ಲಿ‌ ಕುಳಿತಿದ್ದ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಮಹಿಳೆ ಕೂಡಲೇ ಎಚ್ಚೆತ್ತು ವಾರ್ನಿಂಗ್ ಮಾಡಿದರೂ ಬಿಡದ ಈ ಅಸಾಮಿ ಮತ್ತೆ ಅದೇ ಚಾಳಿ ಮುಂದುವರೆಸಿ ಪೊಲೀಸರ ಅತಿಥಿಯಾಗಿದ್ದಾನೆ.

ವಿಮಾನದಲ್ಲಿ ರಾತ್ರಿ 10ರ ನಂತರ ಕೃಷ್ಣನ್ ಇದೇ ರೀತಿ ಮೂರ್ನಾಲ್ಕು ಸಲ‌ ಮಹಿಳೆ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ವಿಮಾನದ ಕ್ಯಾಬಿನ್ ಕ್ರ್ಯೂಗೆ ದೂರು ನೀಡಿದ್ದರು. ಈ ವೇಳೆ ಕೃಷ್ಣನ್ ಜತೆ ಕೂತಿದ್ದ ದಂಪತಿ ಸಹ ಈತನ ಪಾಪ ಕರ್ಮದ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದರಂತೆ. ಹೀಗಾಗಿ ವಿಮಾನದಿಂದ ಇಳಿದ ಕೂಡಲೇ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ. ದೂರು ಪಡೆದ ಪೊಲೀಸರು ಕೃಷ್ಣನ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಖಾಸಗಿ ಕೆಲಸಕ್ಕೆ ಅಂತ ಬಂದಿದ್ದ ಕೃಷ್ಣನ್ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟು ಇದೀಗ ಜೈಲು ಸೇರಿದ್ದಾನೆ. 


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ