Breaking News

ಟಿಪ್ಪರ್ ಢಿಕ್ಕಿ ಹೊಡೆದು ಸೈಕಲ್ ನಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕ ಸಾವು

Spread the love

ಮಂಗಳೂರು: ನಗರದ ಬಜಾಲ್ ಕಟ್ಟಪುಣಿ ಎಂಬಲ್ಲಿ ಟಿಪ್ಪರ್ ಲಾರಿ ಹರಿದು 6ವರ್ಷದ ಬಾಲಕ ಸಾವನ್ನಪ್ಪಿದ ಬುಧವಾರಸಂಜೆ ವೇಳೆಗೆ ನಡೆದಿದೆ

ಬಜಾಲ್ ಜಲ್ಲಿಗುಡ್ಡೆ ಸಮೀಪದ ಕಟ್ಟಪುಣಿಯ ಕೋರ್ದಬ್ಬು ದೇವಸ್ಥಾನದ ರಸ್ತೆಯಲ್ಲಿ ಘಟನೆ ನಡೆದಿದ್ದು ಬಾಲಕ ಸೈಕಲ್ ನಲ್ಲಿ ಆಟವಾಡುತ್ತಿದ್ದಾಗ ಟಿಪ್ಪರ್ ಲಾರಿ ಬಾಲಕನ ಮೇಲಿನಿಂದ ಹರಿದಿದೆ .

 

ಸ್ಥಳೀಯ ನಿವಾಸಿ ಹಿದಾಯತ್ ಎಂಬವರ ಪುತ್ರ ಮೊಹಮ್ಮದ್ ಜೀಶನ್ 6ಮೃತ ಬಾಲಕ . ಮೊಮ್ಮದ್ ಜೀಶಾನ್ ಮತ್ತು ಇನ್ನೊಬ್ಬ ಬಾಲಕ ಜೊತೆಗೆ ಅಂಗಡಿಯೊಂದು ಬಂದಿದ್ದು ಒಬ್ಬ ಹುಡ್ಗ ಇಳಿದು ಹೋಗಿದ್ದಾನೆ ಎನ್ನಲಾಗುತ್ತಿದೆ.

ಈ ವೇಳೆ ಸೈಕಲ್ ನಲ್ಲಿದ್ದ ಹುಡುಗನ ಮೇಲೆ ಟಿಪ್ಪರ್ ಡಿಕ್ಕಿಯಾಗಿದೆ . ಕಟ್ಟಪುಣಿ ರಸ್ತೆ ಕಿರಿದಾದ ರಸ್ತೆಯಾಗಿದ್ದು ಟಿಪ್ಪರ್ ಲಾರಿಯಲ್ಲಿ ಚಾಲಕ ಮಣ್ಣು ಹೇರಿಕೊಂಡು ಫೈಸಲ್ ನಗರಕ್ಕೆ ತೆರಳುತ್ತಿದ್ದಾಗ ಘಟನೆನಡೆದಿದೆ ,


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ