Breaking News

ಜಗನ್‌ ಹೊಸ ಸಂಪುಟ ಅಸ್ತಿತ್ವಕ್ಕೆ : ರೋಜಾಗೆ ಸಚಿವ ಪಟ್ಟ

Spread the love

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯವರ ಸಂಪುಟ ಪುನರಾಚನೆಗೊಂಡಿದ್ದು ಒಟ್ಟು 25 ಸಚಿವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಾತಿ, ಸಮುದಾಯಗಳ ಆಧಾರದಲ್ಲಿ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದ್ದು, 25 ಸ್ಥಾನಗಳಲ್ಲಿ ಸಿಂಹಪಾಲು (10 ಸ್ಥಾನ) ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ.

 

ಮುಖ್ಯಮಂತ್ರಿ ಜಗನ್‌ ಸೇರಿದಂತೆ 2 ಸ್ಥಾನಗಳು ಅಲ್ಪಸಂಖ್ಯಾಕರಿಗೆ ಮೀಸಲಾಗಿದ್ದರೆ, 5 ಸ್ಥಾನಗಳು ಪರಿಶಿಷ್ಟ ಜಾತಿ, ಒಂದು ಸ್ಥಾನ ಪರಿಶಿಷ್ಟ ಪಂಗಡ, ರೆಡ್ಡಿ, ಕಾಪು ಜನಾಂಗಗಳಿಗೆ ತಲಾ ನಾಲ್ಕು ಸ್ಥಾನ ನೀಡಲಾಗಿದೆ.

ರೋಜಾಗೆ ಸಚಿವ ಪಟ್ಟ: ನಾಲ್ವರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದ್ದು ಅವರಲ್ಲಿ ಒಬ್ಬರು ಹಿಂದಿನ ಸಂಪುಟದಲ್ಲಿದ್ದವರೇ ಆಗಿದ್ದಾರೆ. ಇವರಲ್ಲಿ ಮಾಜಿ ಚಿತ್ರ ನಟಿ ರೋಜಾ ಅವರೂ ಒಬ್ಬರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ