Breaking News

ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ; ಅವರು ರಾಜಕಾರಣಕ್ಕೆ ಬರಲ್ಲ.

Spread the love

ಬೆಳಗಾವಿ: ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ (IPS Hemant Nimbalkar) ರಾಜೀನಾಮೆ ನೀಡುವುದಿಲ್ಲ; ಅವರು ರಾಜಕಾರಣಕ್ಕೆ ಬರಲ್ಲ. ಸದ್ಯಕ್ಕೆ ಅವರು ಕಾನೂನು ಪದವಿ ಪಡೆಯುತ್ತಿದ್ದಾರೆ. ಹಾಗಾಗಿ ಅವರೀಗ ಬೆಂಗಳೂರಿನಲ್ಲಿದ್ದು, ಕಾನೂನು ಪದವಿ ಪಡೆಯುತ್ತಿದ್ದಾರೆ. ಈಗ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷ ರಜೆ ಪಡೆದಿದ್ದಾರೆ. ಕಾನೂನು ಪದವಿ ಪೂರೈಸಿದ ಬಳಿಕ ಮತ್ತೆ ಐಪಿಎಸ್ ಅಧಿಕಾರಿಯಾಗಿ ಭಾರತೀಯ ಆಡಳಿತ ಸೇವೆ ಮುಂದುವರಿಸಲಿದ್ದಾರೆ. ಯಾವುದೇ ಕಾರಣಕ್ಕೂ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಖಾನಾಪುರ ಕಾಂಗ್ರೆಸ್​ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ (Anjali Nimbalkar).

ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಬೆಳಗಾವಿಯಲ್ಲಿ ಹೇಳಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷ ರಜೆ ಪಡೆದಿದ್ದಾರೆ. ನಾನೂ ನಿತ್ಯ ಮೂರು ಸಲ ಪತಿ ಜೊತೆ ಫೋನ್ ನಲ್ಲಿ ಮಾತನಾಡುತ್ತೇನೆ. ರಾಜಕೀಯ ಸೇರುವ ವಿಷಯವನ್ನು ಅವರು ನನ್ನ ಜೊತೆಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

 


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ