Breaking News

10ನೇ ದಿನದಲ್ಲಿ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Spread the love

ನವದೆಹಲಿ: ಪೆಟ್ರೋಲ್, ಡೀಸೆಲ್ ದರವು ಕಳೆದ 10 ದಿನಗಳಲ್ಲಿ 9ನೇ ಬಾರಿ ಏರಿಕೆಯಾಗಿದ್ದು, ಗುರುವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 6.40ರೂ. ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 106.48 ರೂ. ಇದ್ದ ಪೆಟ್ರೋಲ್ ದರ 107.32 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 90.50 ರೂ. ಇದ್ದ ಡೀಸೆಲ್ ದರ ರೂ. 91.29ಕ್ಕೆ ಏರಿಕೆಯಾಗಿದೆ.ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 101.81 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.93.07 ದಾಖಲಾಗಿದೆ. ಮುಂಬೈನಲ್ಲಿ ಲೀ ಪೆಟ್ರೋಲ್‍ಗೆ 84 ಪೈಸೆ ಏರಿಕೆಯಾಗಿದ್ದು, ಈ ಮೂಲಕ ಲೀ. ಪೆಟ್ರೋಲ್ ದರ ರೂ. 116.72, ಡೀಸೆಲ್ ರೂ.100.94 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 107.45 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.52 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್‌ಗೆ ಪೆಟ್ರೋಲ್ ಬೆಲೆ 111.35ರೂ ಹಾಗೂ ಡೀಸೆಲ್‍ಗೆ 96.22ರೂ. ದಾಖಲಾಗಿದೆ. 


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ