ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆ

Spread the love

ಪವರ್​ ಸ್ಟಾರ್​ ಪುನೀತ್​​ ರಾಜ್​ ಅಭಿನಯದ ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ಸ್​ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್​​​ಗಳು​ ತಲೆ ಎತ್ತಿವೆ. ಕಮಾಲನಗರದ ವೀರಭದ್ರೇಶ್ವರ ಥಿಯೇಟರ್ ಮುಂದೆ ಪುನೀತ್ ಕಟೌಟ್ ಜೊತೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಜೇಮ್ಸ್​ ಸಿನಿಮಾದ ವಿವಿಧ ಅವತಾರಗಳು ಕಣ್ಮನ ಸೆಳೆಯುತ್ತಿವೆ.

ಶಿವಣ್ಣ ಅಭಿಮಾನಿಗಳ ಸಂಘ, ಪುನೀತ್ ಅಭಿಮಾನಿಗಳು, ಅಪ್ಪು ಯೂತ್ ಬಿಗ್ರೇಡ್ ಅಭಿಮಾನಿಗಳು ಮಾಗಡಿ ರಸ್ತೆಯಲ್ಲಿರೋ ವೀರೇಶ್​ ಥಿಯೇಟರ್​ ಮುಂಭಾಗ ಅಪ್ಪು ಅವರ ಬರೋಬ್ಬರಿ 30 ಕಟೌಟ್​ಗಳನ್ನು ಹಾಕುವ ಮೂಲಕ ದಾಖಲೆ ಬರೆದಿದ್ದಾರೆ.ರಾಜವಂಶದ ಅಭಿಮಾನಿಗಳು, ಪುನೀತ್​ ಅಭಿನಯದ ಅಪ್ಪು ಸಿನಿಮಾದಿಂದ ಹಿಡಿದು ಜೇಮ್ಸ್ ಸಿನಿಮಾವರೆಗೂ ನಟಿಸಿರೋ ಎಲ್ಲಾ ಸಿನಿಮಾದ ಹೆಸರಲ್ಲಿ ಕಟೌಟ್ಸ್​ ನಿಲ್ಲಿಸುವ ಮೂಲಕ ಚಿತ್ರರಂಗದಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ