Breaking News

ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!

Spread the love

ಕೀವ್: ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಜನರ ಗಮನ ಸೆಳೆಯಲು ಯೂಟ್ಯೂಬರ್ಸ್‌ಗಳು ಹೊಸ ಹೊಸ ರೀತಿಯಲ್ಲಿ ವ್ಲಾಗ್, ಲೈವ್ ಸ್ಟ್ರೀಮ್ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಉಕ್ರೇನ್‌ನ ರಾಕ್ ಬ್ಯಾಂಡ್ ಭೀಕರ ಯುದ್ಧದ ನಡುವೆಯೂ ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ.

ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ ಇಂದಿಗೆ 16 ನೇ ದಿನ. ಇಂತಹ ಪರಿಸ್ಥಿತಿಯಲ್ಲಿ ಮನೆ, ನೆಲೆ ಕಳೆದುಕೊಂಡವರು ಸಾವಿರಾರು. ಉಕ್ರೇನ್‌ನ ಸೆಲೋ ಐ ಲುಡಿ ಎಂಬ ರಾಕ್ ಬ್ಯಾಂಡ್ ಯುದ್ಧದ ಪರಿಸ್ಥಿತಿಯಲ್ಲಿ ಬಾಂಬ್ ಶೆಲ್ಟರ್‌ನಿಂದ ಯೂಟ್ಯೂಬ್‌ನಲ್ಲಿ ತಮ್ಮ ಗಾಯನದ ಲೈವ್ ಸ್ಟ್ರೀಮ್ ಮಾಡಿದ್ದಾರೆ. 

ಈ ಬ್ಯಾಂಡ್ ಹಿಂದೆ ತಮ್ಮ ಸ್ಟುಡಿಯೋದಿಂದ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದು, ಯುದ್ಧದಿಂದಾಗಿ ತಮ್ಮ ಮನೆ, ಸ್ಟುಡಿಯೋ ಎಲ್ಲವನ್ನೂ ಕಳೆದುಕೊಂಡಿದೆ. ಇದೀಗ ಬಾಂಬ್ ಶೆಲ್ಟರ್‌ನಲ್ಲಿ ಆಶ್ರಯ ಪಡೆದುಕೊಂಡಿರುವ ರಾಕ್ ಬ್ಯಾಂಡ್ ತಂಡ ಅಲ್ಲಿಂದಲೇ ತಮ್ಮ ಲೈವ್ ಸ್ಟ್ರೀಮ್ ನಡೆಸುತ್ತಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ