ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!

Spread the love

ಮುಂಬೈ: ಕನ್ನಡದ ಬೆಡಗಿ, ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ತಮ್ಮ ‘ಗೆಹ್ರೈಯಾನ್’ ಸಿನಿಮಾ ಸಕ್ಸಸ್‍ನನ್ನು ಕುಟುಂಬದ ಜೊತೆ ಆಚರಿಸಲು ಬೆಂಗಳೂರಿಗೆ ಬರುತ್ತಿದ್ದಾರೆ.

‘ಗೆಹ್ರೈಯಾನ್’ ಸಿನಿಮಾವನ್ನು ‘ಶಕುನ್ ಬಾತ್ರಾ’ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿದ್ದರು. ಅಲ್ಲೆದೆ ಈ ಸಿನಿಮಾದಲ್ಲಿ ದೀಪಿಕಾ ಭಿನ್ನ ಪಾತ್ರವನ್ನು ನಿರ್ವಹಿಸಿದ್ದು, ಪ್ರೇಕ್ಷಕರು ಯಾವ ರೀತಿ ತನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಅವರಲ್ಲಿಯೂ ಇತ್ತು. ಇದೇ ತಿಂಗಳು ‘ಗೆಹ್ರೈಯಾನ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಸಹ ಆಗಿತ್ತು.

ವೀಕೆಂಡ್ ನಲ್ಲಿ ತಮ್ಮ ಕುಟುಂಬದ ಜೊತೆಗೆ ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡಿ, ನಂತರ ಮತ್ತೆ ಅವರು ತಮ್ಮ ಕೆಲಸಕ್ಕೆ ಹಿಂದುರುಗಲಿದ್ದಾರೆ ಎಂದು ವರದಿಯಾಗಿದೆ.

‘ಗೆಹ್ರೈಯಾನ್’ ಸಿನಿಮಾದಲ್ಲಿ ದೀಪಿಕಾ ಬೋಲ್ಡ್ ಮತ್ತು ಮೆಚ್ಯುರಿಟಿ ಅಭಿನಯದಿಂದ ಸಿನಿಪ್ರಿಯರಿಗೆ ಮತ್ತಷ್ಟು ಹತ್ತಿರವಾಗಿದ್ದು, ಮತ್ತೆ ಯಾವ ರೀತಿ ಪಾತ್ರ ಮಾಡುತ್ತಾರೆ ಎಂದು ಪ್ರೇಕ್ಷಕರಲ್ಲಿಯೂ ಕುತೂಹಲವಿದೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ