Breaking News

ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

Spread the love

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ ಜಿಲ್ಲೆಯಲ್ಲೂ, ಪ್ರತಿ ತಾಲೂಕಿನಲ್ಲೂ ಒಂದು ರಸ್ತೆಗಾದರೂ ಅವರ ಹೆಸರನ್ನಿಟ್ಟು ಮರುನಾಮಕರಣ ಮಾಡಲಾಗ್ತಿದೆ.‌

ಪುನೀತ್ ಅವರ ಬೆಂಗಳೂರಿನ ಅಭಿಮಾನಿಗಳು ಸಹ ಇದೇ ಬಯಕೆ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಪ್ರತಿಷ್ಟಿತ ರಸ್ತೆಯೊಂದಕ್ಕೆ ಪುನೀತ್ ಹೆಸರನ್ನ ಮರುನಾಮಕರಣ ಮಾಡಲು ಮನವಿ ಮಾಡಿದ್ದರು. ಈ ಕಾರ್ಯಕ್ಕೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಕೂಡ ಸಾಥ್ ನೀಡಿದರು.

ಈ ಸಂಬಂಧ ಎನ್.ಆರ್.‌ ರಮೇಶ್ ಹಾಗೂ ಅಪ್ಪು ಅಭಿಮಾನಿಗಳು ಬಿಬಿಎಂಪಿಗೆ ಲಿಖಿತ ಮನವಿ ಸಹ ಸಲ್ಲಿಸಿದ್ರು.‌ ಇದೀಗ ಇವರ ಮನವಿಯನ್ನು ಒಪ್ಪಿಕೊಂಡಿರುವ ಪಾಲಿಕೆ ಅಪ್ಪು ಹೆಸರಿಡಲು ಗ್ರೀನ್ ಸಿಗ್ನಲ್ ನೀಡಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ