Breaking News

ಬಾಸುಂಡೆ ಬರುವ ರೀತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ!

Spread the love

ಕಾರವಾರ: ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವ ರೀತಿ ಶಿಕ್ಷಕಿಯೊಬ್ಬರು ಹೊಡೆದು ದಂಡಿಸಿದ ಘಟನೆ ಹೊನ್ನಾವರ ಪಟ್ಟಣದ ಸರ್ಕಾರಿ‌ ಶಾಲೆಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.ಕಲ್ಪನಾ ಹೆಗಡೆ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕಿ. ಶಾಲೆಯಲ್ಲಿ ನಡೆದ ಸಣ್ಣ ಪ್ರಮಾದವೊಂದಕ್ಕೆ ಕುಪಿತರಾದ ಶಿಕ್ಷಕಿ ಕಲ್ಪನಾ ಹೆಗಡೆ 6 ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವ ರೀತಿ ಹೊಡೆದು ಗಾಯಗೊಳಿಸಿದ್ದಾರೆ.

ಇನ್ನು ವಿಷಯ ಪಾಲಕರಿಗೆ ತಿಳಿಯುತ್ತಿದ್ದಂತೆ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪಾಲಕರ ಬಳಿ ಕ್ಷಮೆಯಾಚಿಸಿದ್ದು ಪ್ರಕರಣ ತಣ್ಣಗಾಗಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ. ಆದರೆ, ಪ್ರಕರಣ ತಾಲೂಕಿನಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಶಿಕ್ಷಕಿಯ ವರ್ತನೆಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ