Breaking News

ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

Spread the love

ಭಾಲ್ಕಿ : ಮದುವೆಯ ಸಂಭ್ರಮದ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪುತ್ರ‌ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹೋದ ದಂಪತಿಗಳು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರ್ ತಾಂಡಾ ಬಳಿ ಬುಧವಾರ ತಡರಾತ್ರಿ ನಡೆದಿದೆ.

 

ಸೂರ್ಯಕಾಂತ ಪಾಟೀಲ ಅವರ ಮಗ ಸಾಯಿನಾಥ ಅವರ ಮದುವೆ ಡಿ. 26ಕ್ಕೆ ನಿಶ್ಚಯವಾಗಿದ್ದು, ಬೀದರ ನಗರದಲ್ಲಿ ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಭಾಲ್ಕಿಗೆ ವಾಪಸ್‌ ಆಗುವಾಗ ಕಾರಿನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭಾಲ್ಕಿ ತಾಲೂಕಿನ ಮೇತಿ ಮೇಳಕುಂದಾ ಗ್ರಾಮದ ಸೂರ್ಯಕಾಂತ ಪಾಟೀಲ (50)ಮತ್ತು ಅವರ ಪತ್ನಿ ಜಯಶ್ರೀ ಪಾಟೀಲ (45) ಮೃತ ದುರ್ದೈವಿಗಳು. ಭಾಲ್ಕಿ ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಘಟನಾ ಸ್ಥಳಕ್ಕೆ ಶಾಸಕ ಈಶ್ವರ ಖಂಡ್ರೆ ಹಾಗೂ ‌ಪೊಲೀಸ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

Job: ಅಗ್ನಿವೀರ ನೇಮಕಾತಿ ಆನ್‌ಲೈನ್ ನೋಂದಣಿ ಪ್ರಾರಂಭ

Spread the loveಬೆಳಗಾವಿ: ಇಲ್ಲಿನ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಫೆ.13ರಿಂದ ಏಪ್ರಿಲ್ 1ರವರೆಗೆ ಬೆಳಗಾವಿ, ಬೀದರ ಕಲಬುರಗಿ, ಕೊಪ್ಪಳ, ರಾಯಚೂರು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ