Breaking News
Home / ರಾಜಕೀಯ / ಮೇಲ್ಮನೆ ಸ್ಪರ್ಧಿ ಕೆಜಿಎಫ್ ಬಾಬುಗೆ ಇಬ್ಬರು ಪತ್ನಿ, 3 ಕ್ರಿಮಿನಲ್ ಕೇಸ್: 2000 ಕೋಟಿ ರೂ. ಆಸ್ತಿ!

ಮೇಲ್ಮನೆ ಸ್ಪರ್ಧಿ ಕೆಜಿಎಫ್ ಬಾಬುಗೆ ಇಬ್ಬರು ಪತ್ನಿ, 3 ಕ್ರಿಮಿನಲ್ ಕೇಸ್: 2000 ಕೋಟಿ ರೂ. ಆಸ್ತಿ!

Spread the love

ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಕೆಜಿಎಫ್ ಬಾಬು ಚುನಾವಣಾ ಆಯೋಗಕ್ಕೆ ನೀಡಿದ ಆದಾಯ ತೆರಿಗೆ ವಿವರದಲ್ಲಿ ತಮಗೆ ಇಬ್ಬರು ಪತ್ನಿಯರು ಇದ್ದು, 3 ಕ್ರಿಮಿನಲ್ ಕೇಸ್ ಗಳು ಇವೆ.

ರಾಜ್ಯ ಚುನಾವಣಾ ಆಯೋಗಕ್ಕೆ ಮಂಗಳವಾರ ನೀಡಿದ ವರದಿಯಲ್ಲಿ ತಮ್ಮ ಒಟ್ಟು ಆಸ್ತಿ 2 ಸಾವಿರ ಕೋಟಿ ರೂ.

ಎಂದು ಘೋಷಿಸಿಕೊಂಡಿದ್ದಾರೆ. ಇಬ್ಬರು ಪತ್ನಿಯರು ಹಾಗೂ ಒಬ್ಬ ಪುತ್ರಿ ಹಾಗೂ ನಾಲ್ವರು ಪುತ್ರರು ಸೇರಿ 5 ಮಂದಿ ಮಕ್ಕಳು ಇದ್ದಾರೆ.

ಕೆಜಿಎಫ್ ಬಾಬುಗೆ 16 ಕೋಟಿ 87 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಇದ್ದು, 1593 ಕೋಟಿ ಮೌಲ್ಯದ ಭೂಮಿ ಇದೆ. 1643 ಕೋಟಿ ಸ್ಥಿರಾಸ್ತಿ ಹಾಗೂ 97 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಕೆಜಿಎಫ್ ಬಾಬು ಮೇಲೆ 3 ಕ್ರಿಮಿನಲ್ ಕೇಸ್ ವಿಚಾರಣೆ ಹಂತದಲ್ಲಿವೆ. 23 ಬ್ಯಾಂಕ್ ಖಾತೆಗಳಿದ್ದು, 58 ಕೋಟಿ ಸಾಲ ಇದೆ.

2 ಕೋಟಿ 99 ಲಕ್ಷ ಬೆಲೆಬಾಳುವ 3 ಕಾರು, 1 ಕೋಟಿ 11 ಲಕ್ಷ ಬೆಲೆಬಾಳುವ ವಾಚ್, ಸುಮಾರು 4.5 ಕೆಜಿ ಚಿನ್ನಾಭರಣ, ತಲಾ ಒಂದು ಲಕ್ಷ ಮೌಲ್ಯದ 4 ಮೊಬೈಲ್ ಗಳು, 48 ಕೋಟಿ ಬೆಲೆಬಾಳುವ ಒಟ್ಟು 3 ಕೃಷಿ ಭೂಮಿಗಳು, 26 ಸೈಟ್ ಸೇರಿದಂತೆ 1593 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಇದರಲ್ಲಿ 3 ಕೋಟಿ ಬೆಲೆಬಾಳುವ ಮನೆ ಇವೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ