Breaking News

ಯಾಂಕಾ-ನಿಕ್​ ದಾಂಪತ್ಯದಲ್ಲಿ ಬಿರುಕು?

Spread the love

ಪ್ರಿಯಾಂಕಾ ಹಾಗೂ ನಿಕ್​ ಡಿಸೆಂಬರ್​ 1, 2018ರಂದು ವಿವಾಹವಾಗಿದ್ದರು. ಪ್ರಿಯಾಂಕಾ ನಿಕ್​ಗಿಂತಲೂ ದೊಡ್ಡವರು. ವಯಸ್ಸಿನ ಅಂತರ ಇವರಿಗೆ ಅಡ್ಡಿ ಆಗಲೇ ಇಲ್ಲ. ಪ್ರಿಯಾಂಕಾ ಅವರು ಮದುವೆ ನಂತರ ನ್ಯೂಯಾರ್ಕ್​ನಲ್ಲಿಯೇ ಸೆಟಲ್​ ಆಗಿದ್ದಾರೆ.ಸಮಂತಾ ಅವರು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಅಕ್ಕಿನೇನಿ’ ಸರ್​ನೇಮ್​ಅನ್ನು ತೆಗೆದುಹಾಕಿದ್ದು ವಿಚ್ಛೇದನ ವದಂತಿಗೆ ಕಾರಣವಾಗಿತ್ತು.

ನಂತರ ಅದು ನಿಜವೂ ಆಗಿತ್ತು. ಹೆಸರು ಬದಲಿಸಿದ ಕೆಲವೇ ತಿಂಗಳಲ್ಲಿ ಅವರು ಪತಿ ನಾಗ ಚೈತನ್ಯ ಅವರಿಂದ ದೂರವಾದರು. ಈಗ ಪ್ರಿಯಾಂಕಾ ಚೋಪ್ರಾ ಕೂಡ ಇದೇ ರೀತಿ ನಡೆದುಕೊಂಡಿದ್ದಾರೆ. ಇದರಿಂದ ನಿಕ್​ ಜೋನಸ್​ ಹಾಗೂ ಪ್ರಿಯಾಂಕಾ ದಾಂಪತ್ಯ ಅಂತ್ಯವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ವದಂತಿ ಸುಳ್ಳಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್​ ಡಿಸೆಂಬರ್​ 1, 2018ರಂದು ವಿವಾಹವಾಗಿದ್ದರು. ವಯಸ್ಸಿನಲ್ಲಿ ನಿಕ್​ಗಿಂತಲೂ ಪ್ರಿಯಾಂಕಾ ದೊಡ್ಡವರು. ವಯಸ್ಸಿನ ಅಂತರ ಇವರಿಗೆ ಅಡ್ಡಿ ಆಗಲೇ ಇಲ್ಲ. ಪ್ರಿಯಾಂಕಾ ಅವರು ಮದುವೆ ಆದ ನಂತರ ನ್ಯೂಯಾರ್ಕ್​ನಲ್ಲಿಯೇ ಸೆಟಲ್​ ಆಗಿದ್ದಾರೆ. ಅಲ್ಲಿಯೇ ಐಷಾರಾಮಿ ಹೋಟೆಲ್ ಉದ್ಯಮ ​ಕೂಡ ಓಪನ್​ ಮಾಡಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರ ವಿಚ್ಛೇದನ ವದಂತಿ ಹುಟ್ಟಿಕೊಂಡಿದೆ.

ನಿಕ್​ ಜೋನಸ್​ ಜತೆ ಮದುವೆ ಆದ ನಂತರ ಪ್ರಿಯಾಂಕಾ ಚೋಪ್ರಾ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಹೆಸರಿನ ಜತೆ ಜೋನಸ್​ ಎಂದು ಸೇರಿಸಿಕೊಂಡಿದ್ದರು. ಈಗ ಜೋನಸ್​ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಪ್ರಿಯಾಂಕಾ ಚೋಪ್ರಾ ಎಂದಷ್ಟೇ ಇಟ್ಟಿದ್ದಾರೆ. ಇದು ವಿಚ್ಛೇದನ ವದಂತಿ ಹುಟ್ಟಿಕೊಳ್ಳೋಕೆ ಕಾರಣವಾಗಿದೆ.

ಪ್ರಿಯಾಂಕಾ ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ನಿಕ್​ಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ