Breaking News

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ : ರೈಲುಗಳ ವಿಶೇಷ ದರ ಕಡಿತಗೊಳಿಸಿದ ರೈಲ್ವೆ ಇಲಾಖೆ

Spread the love

ನವದೆಹಲಿ : ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೊರೊನಾ ಕಾಲದಲ್ಲಿ ಸಂಚರಿಸುತ್ತಿದ್ದ ರೈಲುಗಳ ವಿಶೇಷ ದರ ಕಡಿತಗೊಳಿಸಿ ಮೊದಲ ದರ ನಿಗದಿಗೆ ನಿರ್ಧರಿಸಿದ್ದು, ನವೆಂಬರ್ 18 ರಿಂದಲೇ ಜಾರಿಗೆ ಬರಲಿದೆ.

ರೈಲುಗಳ ವಿಶೇಷ ದರ ಕಡಿಗೊಳಿಸುವಂತೆ ರೈಲ್ವೆ ಮಂಡಳಿ ನವೆಂಬರ್ 12 ರಂದು ದೇಶದ ಎಲ್ಲ ರೈಲ್ವೆ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ. ಕೊರೊನಾ ವೇಳೆ ಕೆಲ ರೈಲುಗಳಿಗೆ ನೀಡಲಾಗಿದ್ದ ವಿಶೇಷ ದರ್ಜೆಯನ್ನು ಹಿಂಪಡೆದು ಮೊದಲಿನ ದರ ನಿಗದಿ ಮಾಡಲು ಸೂಚನೆ ನೀಡಿದೆ.

ಕೊರೊನಾ ಕಾಲದಲ್ಲಿ ರೈಲು ಸೇವೆ ನಿಂತಿತ್ತು.ಬಳಿಕ ರೈಲು ಸೇವೆ ಆರಂಭ ಮಾಡಲಾಗಿತ್ತು. ಆದರೆ ಸಾಮಾನ್ಯ ಟಿಕೆಟ್ ದರಕ್ಕಿಂತ ಶೇ. 30 ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಿದ್ದರು. ಇದೀಗ ರೈಲ್ವೆ ಇಲಾಖೆ ವಿಶೇಷ ರೈಲುಗಳ ಟ್ಯಾಗ್ ನ್ನು ಹಿಂಪಡೆದಿದ್ದರಿಂದ ಮೊದಲ ದರದಲ್ಲೇ ಪ್ರಯಾಣ ಬೆಳೆಸಬಹುದಾಗಿದೆ.


Spread the love

About Laxminews 24x7

Check Also

ಕದ್ದುಮುಚ್ಚಿ ಮಾತನಾಡಿಲ್ಲ, ನಾನು ಸಿಎಂ ಏನು ಮಾತನಾಡಿದ್ದೇವೆ ಅನ್ನೋದು ಗೊತ್ತಿದೆ: ಡಿಕೆಶಿ

Spread the love ಬೆಂಗಳೂರು: ನಾನು ಸಿದ್ದರಾಮಯ್ಯ ಏನು ಮಾತಾಡಿಕೊಂಡಿದ್ದೇವೆ ಎನ್ನುವುದು ನನಗೆ ಗೊತ್ತಿದೆ. ನಾವು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ ಎಂದು ಡಿಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ