Breaking News

ಚಿಕನ್​ ಪ್ರಿಯರಿಗೆ ಸಿಹಿ ಸುದ್ದಿ: ನಾಲ್ಕು ತಿಂಗಳ ಬಳಿಕ ಇಳಿಕೆಯಾಯ್ತು ಕೋಳಿ ಮಾಂಸದ ಬೆಲೆ

Spread the love

ಬೆಂಗಳೂರು: ಕಳೆದ ನಾಲ್ಕೈದು ತಿಂಗಳಿಂದ ಚಿಕನ್​ ಬೆಲೆ ಜೇಬು ಸುಡುವಂತಿದೆ. ಮೊದಲೆಲ್ಲ 200 ರೂ. ಒಳಗೆ ಇರುತ್ತಿದ್ದ ಒಂದು ಕೆಜಿ ಚಿಕನ್​ ಬೆಲೆ ಇದೀಗ 200 ರೂ. ದಾಟಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ. ಆದರೆ, ಚಿಕನ್​ ಪ್ರಿಯರಿಗೆ ಇದೀಗ ಸಿಹಿ ಸುದ್ದಿಯೊಂದ ಹೊರಬಿದ್ದಿದೆ.

ಅದೇನೆಂದರೆ ಚಿಕನ್​ ಬೆಲೆಯಲ್ಲಿ ಇಳಿಕೆ ಕಂಡಿದೆ.

ಕೆಜಿಗೆ 240 ರೂಪಾಯಿ ಇದ್ದ ಚಿಕನ್​ ಬೆಲೆ ಇದೀಗ 170ಕ್ಕೆ ಇಳಿದಿದೆ. ಅದಕ್ಕೆ ಕಾರಣ ಕಾರ್ತಿಕ ಮಾಸ. ಕೆಲವರು ಈ ಮಾಸದಲ್ಲಿ ಚಿಕನ್​ ತಿನ್ನುವುದಿಲ್ಲ. ಕಾರ್ತಿಕ ಮಾಸ ಶಿವನಿಗೆ ಪ್ರಿಯವಾಗಿರುವುದರಿಂದ ಶಿವನ ಆರಾಧನೆ ಮಾಡುವವರು ಈ ತಿಂಗಳಲ್ಲಿ ಚಿಕನ್​ ತಿನ್ನುವುದಿಲ್ಲ. ಇದರಿಂದ ಚಿಕನ್​ ಸ್ಟೋರ್​ಗಳಲ್ಲಿ ಬೇಡಿಕೆ ಕುಸಿದಿರುವ ಬೆಲೆಯು ಕುಸಿದಿದೆ. ಮೊದಲೆಲ್ಲ ವಾರದ ಏಳು ದಿನವೂ ಜನರು ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದರು. ಇದೀಗ ಚಿಕನ್​ ಪ್ರಿಯರ ಸಂಖ್ಯೆ ವಿರಳವಾಗಿದೆ ಎಂದು ಶಾಪ್​ ಮಾಲೀಕರು ಹೇಳಿದ್ದಾರೆ.

ಕಾರ್ತಿಕ ಮಾಸದಲ್ಲಿ ಬೆಲೆ ಕುಸಿಯುತ್ತದೆ ಎಂಬುದನ್ನು ಅರಿಯದೇ ಬಾಯ್ಲರ್​ ಚಿಕನ್​ ಸಾಕಿರುವವರಿಗೆ ಬೆಲೆ ಇಳಿಕೆ ನಷ್ಟ ಉಂಟು ಮಾಡಿದೆ. ಇನ್ನು ಕೋಳಿಯನ್ನು ಒಂದು ನಿಗದಿತ ಗಾತ್ರಕ್ಕೆ ಹೆಚ್ಚಿಸಿದ ತಕ್ಷಣ ಮಾರಾಟ ಮಾಡಬೇಕು. ತಡವಾದಲ್ಲಿ ಕೋಳಿ ಬಲಿತು ಹೋಗುವುದರಿಂದ ಕಡಿಮೆ ದರಕ್ಕೆ ಮಾರಾಟವಾಗುತ್ತದೆ. ಹೀಗಾಗಿ ಈ ಮಾಸದಲ್ಲಿ ಹೆಚ್ಚು ಕೋಳಿಗಳು ಮಾರಾಟವಾಗುವುದು ಕಷ್ಟವಾಗಿರುವುದರಿಂದ ನಷ್ಟ ಸಾಮಾನ್ಯವಾಗಿದೆ.

ಇಡೀ ಕಾರ್ತಿಕ ಮಾಸದಲ್ಲಿ ಚಿಕನ್​ ಮಾರಾಟ ಮಂದಗತಿಯಲ್ಲಿರಲಿದೆ. ಕಳೆದ ತಿಂಗಳುಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಮಾರಾಟ ಸಾಮಾನ್ಯವಾಗಿ ಕುಸಿಯುತ್ತದೆ ಎಂಬುದು ಕೋಳಿ ಸಾಕಾಣೆಗಾರರ ಮಾತಾಗಿದೆ. ಅದರಂತೆ ಬೆಲೆ ಇಳಿಕೆಯಾಗಿದ್ದು, ಒಂದು ಕೆಜಿ ಚಿಕನ್​ಗೆ 170 ರೂ. ಇದ್ದು, ಕಳೆದ ನಾಲ್ಕು ತಿಂಗಳಲ್ಲೇ ಅತಿ ಕಡಿಮೆ ಬೆಲೆ ಇದಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ