Breaking News

ಬೆಳಗಾವಿ: ಓಡಿ ಹೋಗಿ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದ ಬಾಲಕ ಅಸ್ವಸ್ಥ

Spread the love

ಓಡಿ ಹೋಗಿ ಬಸ್ ಹತ್ತಲು ಹೋಗಿದ್ದ ವೇಳೆ ಬಾಲಕನೊರ್ವ ಬಸ್‍ನಿಂದ ಬಿದ್ದು ಗಾಯಗೊಂಡಿರುವ ಘಟನೆ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹೌದು ಪಂತ್ ಬಾಳೇಕುಂದ್ರಿಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್ ಹತ್ತುವ ವೇಳೆ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಓಡಿ ಹೋಗಿ ಬಸ್ ಹತ್ತಲು ಹೋದ ಬಾಲಕ ಕೆಳಗೆ ಬಿದ್ದು ಅಸ್ವಸ್ಥನಾಗಿದ್ದಾನೆ. ನಂತರ ಆತನನ್ನು ಅಲ್ಲಿದ್ದ ಸ್ಥಳೀಯರು ಎತ್ತಿಕೊಂಡು ಪ್ಲಾಟ್‍ಫಾರ್ಮನ ಕಟ್ಟೆಯ ಮೇಲೆ ಮಲಗಿಸಿ ನೀರು ಕುಡಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಬಾಲಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ರೀತಿ ಪದೇ ಪದೇ ಘಟನೆಗಳು ಸಂಭವಿಸುತ್ತಿವೆ, ಆದರೂ ಕೂಡ ಸಾರಿಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ರೀತಿ ಬಸ್ ಹತ್ತುವ ವೇಳೆ ಬಿದ್ದು ಜೀವಕ್ಕೆ ಏನಾದರು ಕುತ್ತು ಆದರೆ ಯಾರು ಹೊಣೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.


Spread the love

About Laxminews 24x7

Check Also

ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ

Spread the loveಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ  ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ