Breaking News

ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ: ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ- ಇಬ್ಬರು ಕಾಂಗ್ರೆಸ್ ನಾಯಕರ ಸ್ಫೊಟಕ ಮಾತು ವೈರಲ್.

Spread the love

ಬೆಂಗಳೂರು, ಅಧ್ಯಕ್ಷ ಡಿ ಕೆ ಶಿವಕುಮಾರ್  ಅವರ ಬಗ್ಗೆ ಇಬ್ಬರು ಕಾಂಗ್ರೆಸ್ ನಾಯಕರ ಸ್ಪೋಟಕ ಮಾತು ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಡಿಕೆ ಶಿವಕುಮಾರ್ ರದ್ದು ದೊಡ್ಡ ಸ್ಕ್ಯಾಮ್, ಕಲೆಕ್ಷನ್,ಗಿರಾಕಿ, ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ರೂಪಾಯಿ ಇದೆ. ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ ಎಂದು ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ವೇದಿಕೆಯಲ್ಲಿ ಮಾತನಾಡಿಕೊಂಡಿರುವ ಆಡಿಯೋ ವೈರಲ್ ಆಗಿದೆ.

ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದ್ದರು.ಈ ವೇಳೆ ಕಾಂಗ್ರೆಸ್ ಮುಖಂಡ ಸಲೀಂ ಉಪಸ್ಥಿತರಿದ್ದರು.  ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನಾ ಇಬ್ಬರು ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಬಗ್ಗೆ ಸ್ಫೋಟಕ ಮಾತುಗಳನ್ನಾಡಿದ್ದಾರೆ. ವಿ ಎಸ್ ಉಗ್ರಪ್ಪ ಮತ್ತು ಸಲೀಂ ವೇದಿಕೆಯಲ್ಲಿ ಮಾತನಾಡಿರುವುದು ಸುದ್ದಿ ಚಾನೆಲ್ ಗಳ ರೆಕಾರ್ಡ್ ನಲ್ಲಿ ದಾಖಲಾಗಿದೆ.

ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ. ಶಿವಕುಮಾರ್  ಹುಡುಗರ  ಬಳಿ ಸುಮಾರು 50ರಿಂದ 100 ಕೋಟಿ ಇದೆ, ಡಿಕೆ ಶಿವಕುಮಾರ್​ ರದ್ದು ದೊಡ್ಡ ಸ್ಕ್ಯಾಮ್ ಎಂದು ವಿಎಸ್. ಉಗ್ರಪ್ಪ ಬಳಿ  ಸಲೀಂ ಹೇಳಿದ್ದಾರೆ.

ಈ ವೇಳೆ ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡರು ಎಂದು ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಅಂತ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಬಗ್ಗೆಯೂ ಇಬ್ಬರು ಕಾಂಗ್ರೆಸ್ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಖಡಕ್ ಅಂದ್ರೆ ಖಡಕ್ ಆಗಿ ಮಾತನಾಡುತ್ತಾರೆ. ಶಿವಕುಮಾರ್ ಮಾತನಾಡುವಾಗ ತೊದಲುತ್ತಾರೆ ಎಂದು  ಸಲೀಂ ಹೇಳಿದ್ದಾರೆ. ಅವರೇನು ಡ್ರಿಂಕ್ಸ್ ಮಾಡ್ತಾರಾ? ಡ್ರಿಂಕ್ಸ್ ಮಾಡಲ್ಲ ಅಲ್ವಾ ಅಂತ ವಿಎಸ್‌ ಉಗ್ರಪ್ಪ, ಸಲೀಂ ಮಾತುಕತೆಯ ವೇಳೆ ಚರ್ಚೆ ನಡೆಸಿದ್ದಾರೆ. ಇದು ಇದೀಗ ಬಹಿರಂಗವಾಗಿದೆ.

 


Spread the love

About Laxminews 24x7

Check Also

ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ.

Spread the love ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ. ವಿದೇಶ ಪ್ರವಾಸದಲ್ಲಿರುವ ಜನನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ