Breaking News

ಟಾಟಾ ಕಂಪನಿ ತೆಕ್ಕೆಗೆ ಏರ್ ಇಂಡಿಯಾ

Spread the love

ನವದೆಹಲಿ: ಏರ್ ಇಂಡಿಯಾ ಏರ್ ಲೈನ್ಸ್ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದೆ.

ಅಧಿಕೃತ ಘೋಷಣೆ ಮಾತ್ರ ಬಾಕಿಯಿದ್ದು, ಈ ಮೂಲಕ ಏರ್ ಇಂದಿಯಾವನ್ನು ಟಾಟಾ ಗ್ರೂಪ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಮೊದಲು ಟಾಟಾ ಗ್ರೂಪ್ ಇಂಡಿಯನ್ ಏರ್ ಲೈನ್ಸ್ ಆರಂಭಿಸಿತ್ತು. ಇದೀಗ ಏರ್ ಇಂಡಿಯಾವನ್ನು ಮತ್ತೆ ಖರೀದಿಸುವ ಮೂಲಕ ಮತ್ತೆ ತನ್ನ ಸುಪರ್ದಿಗೆ ಪಡೆದಿದೆ. ಈಗಾಗಲೇ ವಿಸ್ತಾರ, ಏರ್ ಏಷ್ಯಾದಲ್ಲಿ ಟಾಟಾ ಪಾಲುದಾರಿಕೆ ಹೊಂದಿದ್ದು, ಇದೀಗ ಮೂರನೇ ಏರ್ ಲೈನ್ಸ್ ಏರ್ ಇಂಡಿಯಾ ಕೂಡ ಟಾಟಾ ಒಡೆತನಕ್ಕೆ ಬಂದಿದೆ. ಈ ಮೂಲಕ ವಿಮಾನಯಾನದಲ್ಲಿ ಟಾಟಾ ಮತ್ತೆ ಪಾರುಪತ್ಯ ಸಾಧಿಸಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ